ಬುಧವಾರ, ಏಪ್ರಿಲ್ 21, 2021
30 °C
ಎಐಟಿಎ ಅಖಿಲ ಭಾರತ ಪುರುಷರ ಟೆನಿಸ್

ನಾಲ್ಕರ ಹಂತಕ್ಕೆ ಸೂರಜ್, ವಿಕ್ರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಆತಿಥೆಯ ಕರ್ನಾಟಕದ ಅಗ್ರಶ್ರೇಯಾಂಕದ ಆಟಗಾರ ಸೂರಜ್ ಪ್ರಬೋಧ್ ಮತ್ತು ವಿಕ್ರಂ ನಾಯ್ಡು ಅವರು ಇಲ್ಲಿ ನಡೆಯುತ್ತಿರುವ `ಎನ್.ಆರ್. ಗ್ರೂಪ್ ಕಪ್' ಎಐಟಿಎ ಅಖಿಲ ಭಾರತ ಪುರುಷರ 30ಕೆ  ಟೆನಿಸ್ ಟೂರ್ನಿಯ  ಸೆಮಿಫೈನಲ್ ಪ್ರವೇಶಿಸಿದರು.ರಘುವೀರ್ ಟೆನಿಸ್ ಅಕಾಡೆಮಿ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಬುಧವಾರ ಮೈಸೂರಿನ ಹುಡುಗ ಸೂರಜ್ ಆರ್. ಪ್ರಬೋಧ್ 7-6 (1), 7-5ರಿಂದ ಕರ್ನಾಟಕದವರೇ ಆದ ನಿಶಾಂತ್ ಅಂತೋನಿ ರೆಬೆಲ್ಲೋ ವಿರುದ್ಧ ಜಯ ಗಳಿಸಿದರು. ನಿಶಾಂತ್ ಒಡ್ಡಿದ ಪ್ರಬಲ ಸವಾಲನ್ನು ಮೆಟ್ಟಿನಿಂತ ಸೂರಜ್ ತಾಳ್ಮೆ ಕಳೆದುಕೊಳ್ಳದೇ ಆಡಿದರು. ಬ್ಯಾಕ್‌ಹ್ಯಾಂಡ್, ಫೋರ್‌ಹ್ಯಾಂಡ್ ಆಟಗಳ ಆಕರ್ಷಕ ಪ್ರದರ್ಶನ ನೀಡಿದರು.ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕದ ವಿಕ್ರಂ ನಾಯ್ಡು 6-3, 6-4ರಿಂದ ತಮಿಳುನಾಡಿನ ಪಿ. ವಿಘ್ನೇಶ್ ಪ್ರಭು ಅವರನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ನಡೆದರು.ಎಂಟರ ಘಟ್ಟದ ಇನ್ನೆರಡು ಪಂದ್ಯಗಳಲ್ಲಿ ಕರ್ನಾಟಕದ ರಶೀಂ ಸ್ಯಾಮುಯೆಲ್ 6-1, 6-3ರಿಂದ ಗುಜರಾತಿನ ಜಯ್ ಸೋನಿ ವಿರುದ್ಧ; ತಮಿಳುನಾಡಿನ ಮುಕುಂದ್ ಎಸ್. ಕುಮಾರ್ 6-4, 7-6(4) ಗುಜರಾತಿನ ಸಮೀಪ್ ಮೆಹತಾ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು.  ರೆಬೆಲ್ಲೊ-ನಾಯ್ಡು ಸೆಮಿಫೈನಲ್‌ಗೆ:

ಕರ್ನಾಟಕದ ನಿಶಾಂತ್ ಅಂತೋನಿ ರೆಬೆಲ್ಲೊ ಮತ್ತು ವಿಕ್ರಮ್ ನಾಯ್ಡು ಅವರ ಜೋಡಿಯು ಡಬಲ್ಸ್ ವಿಭಾಗದ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು.ಕ್ವಾರ್ಟರ್‌ಫೈನಲ್‌ನಲ್ಲಿ ನಿಶಾಂತ್ ಮತ್ತು ನಾಯ್ಡು 7-6 (8), 7-6ರಿಂದ ಸಾರ್ಥಕ್ ಸಿದ್ಧಾರ್ಥ್ ಮತ್ತು ಮಹೇಶ ಬಾತೀಜಾ ವಿರುದ್ಧ ಜಯಿಸಿದರು.ಇನ್ನೊಂದು ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ ರೋಹಿತ್ ರಂಗಲಾನಿ ಮತ್ತು ಸಿದ್ಧೇಶ್ ಖಾಡೆ 6-4, 6-4ರಿಂದ ಫಹಾದ್ ಮೊಹಮ್ಮದ್ ಮತ್ತು ಎಸ್.ಕೆ. ಮುಕುಂದ್ ವಿರುದ್ಧ;  ವರುಣ್ ಗೋಪಾಲ್ ಮತ್ತು ಎಂ.ಡಿ. ಪ್ರಶಾಂತ್ 6-4, 6-4ರಿಂದ ಅಕ್ಷಯ್ ಕಿಶೋರ್ ಹಾಘೂ ಸುರೇಶಕುಮಾರ್ ಪಾಲ್ ಜೋಡಿ ವಿರುದ್ಧ; ಗುಜರಾತಿನ ಜಯ್ ಸೋನಿ ಮತ್ತು  ಸಮೀಪ್ ಮೆಹತಾ 1-6, 6-1, 10-3ರಿಂದ ಕರ್ನಾಟಕದ ಎಸ್.ಡಿ. ಪ್ರಜ್ವಲ್‌ದೇವ್ ಮತ್ತು ಗಗನ್ ಶರ್ಮಾ ಜೋಡಿ ವಿರುದ್ಧ ಜಯಿಸಿ ಸೆಮಿಫೈಲ್‌ಗೆ ರಹದಾರಿ ಪಡೆದರು.

ಸಿಂಗಲ್ಸ್ ಸೆಮಿಫೈನಲ್‌ಗಳು (ಗುರುವಾರ ಬೆಳಿಗ್ಗೆ 9)ಸೂರಜ್ ಪ್ರಬೋಧ್ (ಕರ್ನಾಟಕ) - ರಶೀಂ ಸ್ಯಾಮ್ಯುಯೆಲ್ (ಕರ್ನಾಟಕ)

ವಿಕ್ರಮ್ ನಾಯ್ಡು (ಕರ್ನಾಟಕ)- ಮುಕುಂದ ಎಸ್. ಕುಮಾರ್ (ತಮಿಳುನಾಡು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.