ಮಂಗಳವಾರ, ನವೆಂಬರ್ 12, 2019
28 °C

ನಾಲ್ಕು ಬಾರಿಯ ವೈರಿಗಳು ಈಗ ಸ್ನೇಹಿತರು

Published:
Updated:

ಮೊಳಕಾಲ್ಮುರು: ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ವಿಧಾನಸಭಾ ಚುನಾವಣೆಯಲ್ಲಿ ವೈರಿಗಳಾಗಿ ಸ್ಪರ್ಧೆ ಮಾಡಿದ್ದ ಇಬ್ಬರು ಅಭ್ಯರ್ಥಿಗಳು ಈ ಸಾರಿ ಒಂದೇ ಪಕ್ಷದಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿರುವುದು  ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.ಎನ್.ವೈ. ಗೋಪಾಲಕೃಷ್ಣ ಕಳೆದ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಅವರಿಗೆ ಪ್ರತಿ ಚುನಾವಣೆಯಲ್ಲಿಯೂ ಜನತಾ ಪರಿವಾರ ಅಭ್ಯರ್ಥಿಯಾಗಿ ವಿರುದ್ಧವಾಗಿ ಸ್ಪರ್ಧಿಸಿ ಪರಾಭವಗೊಂಡಿರುವ ಪ್ರಭಾವಿ ಮುಖಂಡ ಪಟೇಲ್ ಜಿಎಂ. ತಿಪ್ಪೇಸ್ವಾಮಿ (ಎತ್ನಟ್ಟಿಗೌಡ) ಈ ಬಾರಿ ಸ್ಪರ್ಧೆ ಮಾಡದೇ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದು ಇದಕ್ಕೆ ಕಾರಣವಾಗಿದೆ.ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ 26 ಸಾವಿರ ಮತ ಪಡೆದಿದ್ದ ಎತ್ನಟ್ಟಿಗೌಡ ಈ ಬಾರಿ ಎಷ್ಟರ ಮಟ್ಟಿಗೆ ಈ ಮತಗಳನ್ನು ಕಾಂಗ್ರೆಸ್‌ಗೆ ಬದಲಾಯಿಸಲಿದ್ದಾರೆ ಎಂಬುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಬಿಎಸ್‌ಆರ್ ಕಾಂಗ್ರೆಸ್ ಸೇರ್ಪಡೆಯಾಗಿ ಟಕೆಟ್ ಸಿಗದ ಕಾರಣ ಎತ್ನಟ್ಟಿಗೌಡ ಕಾಂಗ್ರೆಸ್ ಸೇರ್ಪಡೆಯಾದರು. ಈ ಚುನಾವಣೆಯಲ್ಲಿ ಎತ್ನಟ್ಟಿಗೌಡ ಸ್ಪರ್ಧೆ ಮಾಡದೇ ಇದ್ದರೂ ಪರೋಕ್ಷವಾಗಿ ಮತ ಪಡೆಯುವ ಲೆಕ್ಕಾಚಾರದಲ್ಲಿ ಅವರ ಹೆಸರು ಸಹ ಕೇಳಿ ಬರುತ್ತಿದೆ.

ಪ್ರತಿಕ್ರಿಯಿಸಿ (+)