ನಾಲ್ಕು ಬಾರಿ ಫೈನಲ್‌ಗೆ ಸಾಕ್ಷಿಯಾದ ಲಾರ್ಡ್ಸ್

7

ನಾಲ್ಕು ಬಾರಿ ಫೈನಲ್‌ಗೆ ಸಾಕ್ಷಿಯಾದ ಲಾರ್ಡ್ಸ್

Published:
Updated:

ಬೆಂಗಳೂರು: ಪಂದ್ಯ ಯಾವ ಕ್ರೀಡಾಂಗಣದಲ್ಲಿ ನಡೆಯುತ್ತದೆ ಎನ್ನುವ ಆಧಾರದ ಮೇಲೆ ಯಾವ ತಂಡಕ್ಕೆ ಗೆಲುವು ಒಲಿಯುತ್ತದೆ. ಯಾವ ಅಂಗಳದಲ್ಲಿ ಮೊದಲ ಇನಿಂಗ್ಸ್ ಅಥವಾ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರೆ ಅನುಕೂಲ ಎನ್ನುವ ಲೆಕ್ಕಾಚಾರವನ್ನು ಕ್ರಿಕೆಟ್ ಪಂಡಿತರು ಪಂದ್ಯದ ಆರಂಭಕ್ಕೆ ಮುನ್ನವೇ ಹಾಕುತ್ತಿದ್ದಾರೆ. ಇದುವರೆಗೂ ನಡೆದ ಒಟ್ಟು ಒಂಬತ್ತು ವಿಶ್ವಕಪ್ ಕ್ರಿಕೆಟ್ ಟೂರ್ನಿ ಯ ಫೈನಲ್ ಪಂದ್ಯಕ್ಕೆ ಹೆಚ್ಚು ಸಾಕ್ಷಿಯಾಗಿದ್ದು ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನ. ನಾಲ್ಕು ಫೈನಲ್ ಪಂದ್ಯಗಳು ಇಲ್ಲಿ ನಡೆದಿವೆ. ಇನ್ನುಳಿದಂತೆ ಈಡನ್ ಗಾರ್ಡನ್ಸ್, ಎಂಸಿಜೆ, ಗದಾಫಿ, ವಾಂಡರರ್ಸ್ ಹಾಗೂ ಕನ್ಸೆಂಗ್ಟನ್ ಓವೆಲ್‌ನ ಕ್ರೀಡಾಂಗಣದಲ್ಲಿ ತಲಾ ಒಂದು ಫೈನಲ್ ಪಂದ್ಯಗಳಾಗಿವೆ. ಅಂಗಳದ ಮಹಿಮೆಗಳ ಕುರಿತು ಕೆಲ ಕುತೂಹಲದ ಸಂಗತಿಗಳ ತೋರಣ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.*1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯನ್ನು ಮುಡಿಗೇರಿಸಿ ಕೊಂಡಿದ್ದ ಕಪಿಲ್‌ದೇವ್ ಸಾರಥ್ಯದ ಭಾರತ ತಂಡವು ಕೂಡಾ ಫೈನಲ್ ಆಡಿದ್ದು ಲಾರ್ಡ್ಸ್ ಅಂಗಳದಲ್ಲಿ. ಇದನ್ನು 1814ರಲ್ಲಿ ನಿರ್ಮಿಸಲಾ ಗಿತ್ತು. 1884 ಜುಲೈ 21ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯ ಇಲ್ಲಿ ನಡೆದಿತ್ತು. 1972ರಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವೇ ಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿದೆ. 28,000 ಜನ ಕುಳಿತು ನೋಡಬಹುದಾದ ಆಸನದ ವ್ಯವಸ್ಥೆ ಈ ಕ್ರೀಡಾಂಗಣದಲ್ಲಿದೆ.* ಫೈನಲ್‌ನ ಒಟ್ಟು ನಾಲ್ಕು ಪಂದ್ಯಗಳು ನಡೆದ ಲಾರ್ಡ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಒಂದು ಸಲ ಮಾತ್ರ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡ (ಆಸ್ಟ್ರೇಲಿಯಾ) ಚಾಂಪಿಯನ್ ಆಗಿದೆ. ಮೊದಲ ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ 8 ವಿಕೆಟ್‌ಗೆ 291ರನ್, ಆಸ್ಟ್ರೇಲಿಯಾ 274; ಎರಡನೇಯದರಲ್ಲಿ ವೆಸ್ಟ್ ಇಂಡೀಸ್ 9 ವಿಕೆಟ್‌ಗೆ 286, ಇಂಗ್ಲೆಂಡ್ 194; ಮೂರನೇ ವಿಶ್ವಕಪ್‌ನಲ್ಲಿ ಭಾರತ 183, ವೆಸ್ಟ್ ಇಂಡೀಸ್ 140 ಗಳಿಸಿ ಪ್ರಶಸ್ತಿ ಪಡೆ ದಿತ್ತು. ಆದರೆ ಲಾರ್ಡ್ಸ್ ಅಂಗಳದಲ್ಲಿ ನಡೆದ ಏಳನೇ ವಿಶ್ವಕಪ್‌ನ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ಸೋಲು ಅನುಭವಿಸಿತ್ತು.39 ಓವರ್‌ಗಳಲ್ಲಿ 132 ರನ್‌ಗಳಿಗೆ ಆಸ್ಟ್ರೇಲಿಯಾ ಆ ತಂಡವನ್ನು ಕಟ್ಟಿ ಹಾಕಿತ್ತು. ಕೇವಲ 20.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ವಿಜಯದ ಗುರಿಯನ್ನು ಆಸೀಸ್ ಪಡೆ ತಲುಪಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಗೆಲುವಿನ ಮೂಲಕ ಲಾರ್ಡ್ಸ್ ಅಂಗಳದಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿ ಟ್ರೋಫಿ ಗೆದ್ದ ಎರಡನೇ ತಂಡ ಆಸ್ಟ್ರೇಲಿಯಾ ಎನ್ನಿಸಿಕೊಂಡಿತು.* ಇದುವರೆಗಿನ ಒಟ್ಟಾರೆ ಫೈನಲ್‌ಗಳ ಇತಿಹಾಸದ ಒಂಬತ್ತು ಫೈನಲ್ ಪಂದ್ಯಗಳಲ್ಲಿ ಏಳು ಸಲ ಮೊದಲು ಬ್ಯಾಟ್ ಮಾಡಿದ ತಂಡವೇ ಚಾಂಪಿಯನ್ ಆಗಿದೆ. 1996 ಹಾಗೂ 1999ರಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡಗಳು ಪ್ರಶಸ್ತಿ ಗೆದ್ದಿವೆ.* ಈ ಸಲದ  ಫೈನಲ್ ಪಂದ್ಯ ನಡೆಯುವ ಮುಂಬೈಯ ವಾಂಖೇಡೆ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್‌ನ ಫೈನಲ್ ನಡೆಯಲಿದೆ. 1974ರಲ್ಲಿ ನಿರ್ಮಾಣ ವಾದ ಈ ಕ್ರೀಡಾಂಗಣವು 45,000 ಆಸನ ವ್ಯವಸ್ಥೆಯನ್ನು ಒಳಗೊಂಡಿದೆ. 1975ರಲ್ಲಿ ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವೆ ನಡೆದ ಟೆಸ್ಟ್ ಪಂದ್ಯಕ್ಕೆ ಮೊದಲ ಬಾರಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಇಲ್ಲಿ ಏಕದಿನ ಪಂದ್ಯ ನಡೆದಿದ್ದು 1987ರಲ್ಲಿ ಅದು ಭಾರತ ಮತ್ತು ಶ್ರೀಲಂಕಾ ನಡುವಣದ ಪಂದ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry