ನಾಲ್ಕು ವರ್ಷದ ಮಗುವಿಗೆ ಲೈಂಗಿಕ ಕಿರುಕುಳ

7
ಜ್ಞಾನಭಾರತಿ ಠಾಣೆಯ ಪೊಲೀಸರಿಂದ ಕ್ಲೀನರ್ ಬಂಧನ

ನಾಲ್ಕು ವರ್ಷದ ಮಗುವಿಗೆ ಲೈಂಗಿಕ ಕಿರುಕುಳ

Published:
Updated:

ಬೆಂಗಳೂರು: ನಾಲ್ಕು ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ನಾಗರಬಾವಿ ಹತ್ತನೇ ಬ್ಲಾಕ್‌ನಲ್ಲಿರುವ ಸೇಂಟ್ ಸೋಫಿಯಾ ಶಾಲಾ ವಾಹನದ ಕ್ಲೀನರ್‌ನನ್ನು ಜ್ಞಾನಭಾರತಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಮೂಲತಃ ಯಾದಗಿರಿ ಜಿಲ್ಲೆಯವನಾದ ಸಾಬಣ್ಣ (24) ಬಂಧಿತ ಆರೋಪಿ. ಆರು ತಿಂಗಳ ಹಿಂದೆ ವಾಹನದ ಕ್ಲೀನರ್ ಆಗಿ ಶಾಲೆಗೆ ಸೇರಿದ್ದ ಆತ, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಶಾಲಾ ಆಡಳಿತ ಮಂಡಳಿ ನೀಡಿರುವ ಮನೆಯಲ್ಲೇ ವಾಸವಾಗಿದ್ದಾನೆ.`ಸೇಂಟ್ ಸೋಫಿಯಾ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿರುವ ಮಗಳನ್ನು ಬೆಳಿಗ್ಗೆ ಒಂಬತ್ತು ಗಂಟೆಗೆ ಶಾಲೆಗೆ ಬಿಟ್ಟು ಬಂದಿದ್ದೆ. ಮಧ್ಯಾಹ್ನ ಒಂದು ಗಂಟೆಗೆ ಆಕೆಯನ್ನು ಮನೆಗೆ ಕರೆದುಕೊಂಡು ಬರುವಾಗ ಹೊಟ್ಟೆ ನೋವಿರುವುದಾಗಿ ಹೇಳಿದಳು. ಆಕೆ ನಡೆಯಲೂ ಸಾಧ್ಯವಾಗದಷ್ಟು ಅಸ್ವಸ್ಥಳಾಗಿದ್ದಳು. ಮನೆಗೆ ಕರೆದುಕೊಂಡು ಹೋಗಿ ಆಕೆಯನ್ನು ವಿಚಾರಿಸಿದಾಗ, ಸಾಬಣ್ಣ ಶಾಲೆಯ ಶೌಚಾಯಯಕ್ಕೆ ಕರೆದುಕೊಂಡು ಹೋಗಿ, ಲೈಂಗಿಕ ಕಿರುಕುಳ ನೀಡಿದ ಎಂದು ಹೇಳಿದಳು. ಕಳೆದ 20 ದಿನಗಳಿಂದ ಇದೇ ರೀತಿ ಕಿರುಕೊಳ ಕೊಟ್ಟಿದ್ದಾನೆ ಎಂದು ಆಕೆ ಹೇಳಿದ್ದಾಳೆ' ಎಂದು ಮಗುವಿನ ತಾಯಿ ತಿಳಿಸಿದ್ದಾರೆ.`ಮಗು ಹಾಗೂ ಆರೋಪಿಯನ್ನು ವಾಣಿ ವಿಲಾಸ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಲೈಂಗಿಕ ಕಿರುಕುಳ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅಂತಿಮ ವರದಿ ಬಂದ ನಂತರ ಮಗುವಿನ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬುದು ಸ್ಪಷ್ಟವಾಗಲಿದೆ' ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಆರೋಪಿ ಎರಡು ದಿನ ಕೆಲಸಕ್ಕೆ ರಜೆ ಪಡೆದು ಸೋಮವಾರ ರಾತ್ರಿಯೇ ಊರಿಗೆ ಹೋಗಿದ್ದ. ಆತನ ಕುಟುಂಬ ಸದಸ್ಯರಲ್ಲಿ ಮಾಹಿತಿ ಪಡೆದು ಆತನನ್ನು ಬಂಧಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry