ನಾಲ್ವಡಿಗಿ ಸೇತುವೆ ಎತ್ತರ ಹೆಚ್ಚಿಸಲು ಆಗ್ರಹ

7

ನಾಲ್ವಡಿಗಿ ಸೇತುವೆ ಎತ್ತರ ಹೆಚ್ಚಿಸಲು ಆಗ್ರಹ

Published:
Updated:

ಯಾದಗಿರಿ: ಸಮೀಪದ ನಾಯ್ಕಲ್–-ಚಟ್ನಳ್ಳಿಯ ರಸ್ತೆಯ ನಾಲ್ವಡಿಗಿ ಗ್ರಾಮದ ಬಳಿಯ ಸೇತುವೆಯನ್ನು ತಳಮಟ್ಟದಲ್ಲಿ ನಿರ್ಮಾಣ ಮಾಡ­ಲಾಗುತ್ತಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ನಾಲ್ವಡಿಗಿ, ಬಲಕಲ್, ಚಟ್ನಳ್ಳಿ ಗ್ರಾಮಸ್ಥರು ದೂರಿದ್ದಾರೆ.ಧಾರಾಕಾರ ಮಳೆಯಿಂದ ಸೇತುವೆ ಮೇಲೆ ನೀರು ಬಂದು ನಾಯ್ಕಲ್–-ಚಟ್ನಳ್ಳಿ ರಸ್ತೆಯ ಸಂಪರ್ಕ ಕಡಿತಗೊಂಡಿತ್ತು. ಪ್ರಯಾಣಿಕರು, ತೊಂದರೆ ಎದುರಿಸಿದ್ದು, ಇದೀಗ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು, ಸೇತುವೆಯ ಎತ್ತರವನ್ನು ಹೆಚ್ಚಿಸಿದರೆ ಹಳ್ಳಕ್ಕೆ ಹೆಚ್ಚುವರಿ ನೀರು ಹರಿದು ಬಂದರೂ ರಸ್ತೆ ಸಂಪರ್ಕ ಕಡಿತಗೊಳ್ಳುವುದಿಲ್ಲ. ಸೇತುವೆಯ ಎತ್ತರವನ್ನು ಹೆಚ್ಚಿಸಬೇಕು. ಸೇತುವೆ ಮೇಲೆ ಸುಗಮ ಸಂಚಾರಕ್ಕೆ ಅನುವು ಮಾಡಿಕಡಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry