ನಾಲ್ವರನ್ನು ಬಲಿ ಪಡೆದ ಸಿಪಾಯಿ

7
ಪಾನಮತ್ತ ವಾಹನ ಚಾಲನೆ

ನಾಲ್ವರನ್ನು ಬಲಿ ಪಡೆದ ಸಿಪಾಯಿ

Published:
Updated:

ಬೆಂಗಳೂರು: ಸೇನಾ ಸಿಪಾಯಿ ಯೊಬ್ಬ ಪಾನಮತ್ತ­ನಾಗಿ ಲಾರಿ ಚಾಲನೆ ಮಾಡಿ ನಾಲ್ವರ ಜೀವ ಬಲಿ ಪಡೆದಿರುವ ಘಟನೆ ಮೈಸೂರು ರಸ್ತೆಯ ದೊಡ್ಡಬೆಲೆ ಜಂಕ್ಷನ್‌ನಲ್ಲಿ ಸೋಮವಾರ ನಡೆದಿದೆ.ಬಾಬುಸಾಪಾಳ್ಯದ ಮಂಜು ಪ್ರಸಾದ್‌ (53), ಅವರ ಪತ್ನಿ ಮಹಾ ದೇವಿ (45), ಅಂಚೆಪಾಳ್ಯ ಸಮೀಪದ ಚೆಳ್ಳಘಟ್ಟ ನಿವಾಸಿಗಳಾದ ಅಂಜನ್‌ ಕುಮಾರ್‌ (24) ಮತ್ತು ಪ್ರಕಾಶ್‌ (19) ಮೃತಪಟ್ಟವರು. ಆರೋಪಿ ಚಾಲಕ ಜ್ಯೋತಿ ಬಾ ಮಾರುತಿ ಬೆಳಗಾಂವ್ಕರ್‌ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.‘ಆರೋಪಿ ಚಾಲಕ ಒಂದು ಕೈನಲ್ಲಿ ಬಾಟಲಿ ಹಿಡಿದುಕೊಂಡು, ಮತ್ತೊಂದು ಕೈನಲ್ಲಿ ವಾಹನ ಚಾಲನೆ ಮಾಡಿಕೊಂಡು ಬೆಳಿಗ್ಗೆ 10.45ರ ಸುಮಾರಿಗೆ ದೊಡ್ಡಬೆಲೆ ಜಂಕ್ಷನ್‌ಗೆ ಬಂದ. ಈ ವೇಳೆ ನಿಯಂತ್ರಣ ಕಳೆದು ಕೊಂಡ ಆತ, ಮೊದಲು ರಸ್ತೆ ವಿಭಜ ಕಕ್ಕೆ ವಾಹನ ಗುದ್ದಿಸಿದ್ದಾನೆ. ನಂತರ ಪಕ್ಕದ ರಸ್ತೆಗೆ ನುಗ್ಗಿದ ವಾಹನ, ಬೈಕ್‌ ನಲ್ಲಿ ಹೋಗುತ್ತಿದ್ದ ಅಂಜನ್‌ ಮತ್ತು ಪ್ರಕಾಶ್‌ಗೆ ಡಿಕ್ಕಿ ಹೊಡೆಯಿತು. ಮುಂದುವರಿದು ಮಂಜುಪ್ರಸಾದ್‌ ದಂಪತಿ ಚಲಿಸುತ್ತಿದ್ದ ಬೈಕ್‌ಗೂ ಗುದ್ದಿತು. ಇದರಿಂದಾಗಿ ನಾಲ್ಕೂ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.ಮಂಜುಪ್ರಸಾದ್ ಅವೆನ್ಯೂ ರಸ್ತೆ ಯಲ್ಲಿ­ರುವ ಖಾಸಗಿ ಕಂಪೆನಿ­ಯ ಮಾರುಕಟ್ಟೆ ವಿಭಾಗದಲ್ಲಿ ಉದ್ಯೋಗಿ ಯಾಗಿದ್ದರು. ಅವರ ಪತ್ನಿ ಬಾಂಬೆ ರಿಯಾನ್‌ ಸಿದ್ಧ ಉಡುಪು ಕಾರ್ಖಾನೆ ಯಲ್ಲಿ ಕೆಲಸ ಮಾಡುತ್ತಿದ್ದರು.ದಂಪತಿಗೆ ಸಿಂದೂ (22) ಮತ್ತು ಶಕ್ತಿ ವಿನಾಯಕ (19) ಎಂಬ ಇಬ್ಬರು ಮಕ್ಕಳಿದ್ದಾರೆ. ಕುಟುಂಬದ ಸದಸ್ಯರು ಗಣೇಶನ ಮೂರ್ತಿ ನೋಡಲು ಕೆಂಗೇರಿ ಉಪ ನಗರಕ್ಕೆ ಹೋಗಿದ್ದರು. ವಾಪಸ್‌ ಬರುವಾಗ ಮಕ್ಕಳನ್ನು ಬಸ್‌ಗೆ ಹತ್ತಿಸಿ ದಂಪತಿ ಬೈಕ್‌ನಲ್ಲಿ ಮನೆಗೆ ಹೊರಟಿದ್ದರು.ಅಪಘಾತದಲ್ಲಿ ಮೃತಪಟ್ಟ ಅಂಜನ್‌ ಖಾಸಗಿ ಕಂಪೆನಿಯೊಂದ ರಲ್ಲಿ ಉದ್ಯೋಗಿಯಾಗಿದ್ದರು­. ಪ್ರತಿಷ್ಠಿತ ಕಾಲೇಜಿನಲ್ಲಿ ಡಿಪ್ಲೊಮಾ ಮಾಡುತ್ತಿದ್ದ ಪ್ರಕಾಶ್‌, ಖಾಸಗಿ ಸಂಸ್ಥೆಯಲ್ಲಿ ತರಬೇತಿ ಪಡೆಯು ತ್ತಿದ್ದರು. ಇಬ್ಬರೂ ಪೂಜಾ ಸಾಮಗ್ರಿ  ತರಲು ಬೈಕ್‌ನಲ್ಲಿ ಕೆಂಗೇರಿಗೆ ಹೋಗುತ್ತಿದ್ದರು.‘ಡಿಕ್ಕಿಯ ರಭಸಕ್ಕೆ ಬೈಕ್‌ಗಳು ಚೆಲ್ಲಾ ಪಿಲ್ಲಿ­ಯಾದವು. ಮೂರು ಶವಗಳು  ರಸ್ತೆ ಮೇಲೆ ಬಿದ್ದರೆ, ಮಹಾ ದೇವಿ ಅವರ ಶವ ಮೋರಿ ಯಲ್ಲಿ ಪತ್ತೆಯಾಯಿತು’ ಎಂದು ಕೆಂಗೇರಿ ಸಂಚಾರ ಪೊಲೀಸರು ತಿಳಿಸಿದರು. ಪ್ರಕರಣ ದಾಖಲಾಗಿದೆ.

ಬೆಳಗಾವಿ ಮೂಲದ ಬೆಳ ಗಾಂವ್ಕರ್‌ 11 ವರ್ಷಗಳ ಹಿಂದೆ ಅಹಮದಾ­ಬಾದ್‌ನ ‘944 ಟಿಪಿಟಿ’ ಎಂಬ ಸೇನಾ ಕಂಪೆನಿಗೆ ಸೇರಿದ್ದ. ಇದೇ ಜೂನ್‌ 15 ರಿಂದ ಆತನನ್ನು ನಗರದ ಮಾಣೇಕ್‌ಷಾ ಪರೇಡ್‌ ಮೈದಾನ ಸಮೀಪದ ಎಎಸ್‌ಸಿ ಸೇನಾ ಕೇಂದ್ರದ ಪೂರೈಕೆ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.ದಸರಾ ಉತ್ಸವದ ಸಂದರ್ಭದಲ್ಲಿ ಬೈಕ್‌ಗಳಲ್ಲಿ ಸಾಹಸ ದೃಶ್ಯಗಳನ್ನು ಪ್ರದರ್ಶಿಸುವ ಸಿಬ್ಬಂದಿಗಾಗಿ ಮೈಸೂ ರಿನ ಬನ್ನಿಮಂಟಪದಲ್ಲಿರುವ ಟಾರ್ಚ್ ಲೈಟ್‌ ಪರೇಡ್‌ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ (ಸೆ.7, 8) ಎರಡು ದಿನಗಳ ‘ತರಬೇತಿ ಮೇಳ’ ಆಯೋಜಿಸಲಾಗಿತ್ತು. ಆ ಸಿಬ್ಬಂದಿಗೆ ಅಗತ್ಯವಾದ ಬೈಕ್‌ಗಳನ್ನು ಪ್ರತಿ ವರ್ಷವೂ ಇಲ್ಲಿನ ಎಎಸ್‌ಸಿ ಸೇನಾ ಕೇಂದ್ರದಿಂದ ಪೂರೈಸಲಾ ಗುತ್ತಿತ್ತು.   ಈ ಬಾರಿಯೂ ಬೆಳಗಾಂ ವ್ಕರ್‌, ಲಾರಿಯಲ್ಲಿ ಬೈಕ್‌ ತುಂಬಿ ಕೊಂಡು ಸೆ.4ರಂದು ಮೈಸೂರಿಗೆ ಹೋಗಿದ್ದ.ತರಬೇತಿ ಮೇಳ ಮುಗಿದ ಬಳಿಕ ಬೈಕ್‌ಗಳನ್ನು ಪುನಃ ಲಾರಿಯಲ್ಲಿ ತುಂಬಿಕೊಂಡು ನಗರಕ್ಕೆ ವಾಪಸಾ ಗುವಾಗ ಈ ದುರ್ಘಟನೆ ನಡೆದಿದೆ’ ಎಂದು ಪೊಲೀಸರು ಹೇಳಿದರು.‘ಘಟನಾ ಸಂದರ್ಭದಲ್ಲಿ ಚಾಲಕ ಸೇನೆಯ ಸಿಪಾಯಿ ಸಮವಸ್ತ್ರ ಧರಿಸಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದ ಆತನನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು.  ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿ ದೇಹದಲ್ಲಿ 343 ಮಿಲಿ ಗ್ರಾಂ ಮದ್ಯದ ಪ್ರಮಾಣವಿತ್ತು. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸಂಚಾರ ವಿಭಾಗದ (ಪಶ್ಚಿಮ) ಡಿಸಿಪಿ ಗಿರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry