ನಾಲ್ವರು ಕೆಎಸ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ

7

ನಾಲ್ವರು ಕೆಎಸ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ನಾಲ್ಕು ಮಂದಿ ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಶುಕ್ರವಾರ ಆದೇಶ ಹೊರಡಿಸಿದ್ದು, ಅವರನ್ನು ಹಾಲಿ ಇರುವ ಸ್ಥಾನಗಳಲ್ಲಿಯೇ ಮುಂದುವರಿಸಲಾಗಿದೆ.ಕೆಎಎಸ್ ಆಯ್ಕೆ ಶ್ರೇಣಿ ಅಧಿಕಾರಿಯಾದ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ       ನಿರ್ವಹಣಾಧಿಕಾರಿ ಎನ್.ಜಯರಾಂ ಅವರಿಗೆ ಸೂಪರ್ ಟೈಂ ಸ್ಕೇಲ್‌ಗೆ ಬಡ್ತಿ ನೀಡಲಾಗಿದೆ.ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿಗಳಾದ ಮೈಸೂರಿನ  ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾ   ನಾಯಕ್, ವಿಜಾಪುರದ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಎನ್.ಜಿದ್ದಿಮನಿ, ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಕೆ.ಎನ್.ನಿಂಗಪ್ಪ ಅವರಿಗೆ ಆಯ್ಕೆಶ್ರೇಣಿಗೆ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry