ಬುಧವಾರ, ನವೆಂಬರ್ 20, 2019
23 °C

ನಾಲ್ವರು ಶಾಸಕರ ರಾಜೀನಾಮೆ

Published:
Updated:

ಬೆಂಗಳೂರು: ಬಿಜೆಪಿ ಶಾಸಕರ ರಾಜೀನಾಮೆ ಪರ್ವ ಮುಂದುವರಿದಿದೆ. ಸುರಪುರದ ಶಾಸಕ ರಾಜುಗೌಡ, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಗುರುವಾರ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಶಿವರಾಜ ಸಜ್ಜನ ಅವರೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ವಿರೂಪಾಕ್ಷಪ್ಪ ಮತ್ತು ಸಜ್ಜನ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.ರಾಜುಗೌಡ ಮತ್ತು ರಾಮಚಂದ್ರ ಅವರು ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಕಚೇರಿಗೆ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದು, ಇನ್ನೂ ಅಂಗೀಕರಿಸಿಲ್ಲ.

ವಿರೂಪಾಕ್ಷಪ್ಪ, ರಾಮಚಂದ್ರ ಮತ್ತು ಸಜ್ಜನ ಅವರು ಕೆಜೆಪಿ ಸೇರಲಿದ್ದಾರೆ. ರಾಜುಗೌಡ, ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ.

ಪ್ರತಿಕ್ರಿಯಿಸಿ (+)