ನಾಳೆಯಿಂದ ಆಷಾಢ ಪೂಜೆ

7

ನಾಳೆಯಿಂದ ಆಷಾಢ ಪೂಜೆ

Published:
Updated:
ನಾಳೆಯಿಂದ ಆಷಾಢ ಪೂಜೆ

ಶ್ರೀ ಮಾಂಕಾಳಿ ಅಮ್ಮನವರ ದೇವಾಲಯದಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ (ಆ.2ರಿಂದ 12) ಆಷಾಢ ಆಚರಣೆ ಅಂಗವಾಗಿ ವಿವಿಧ ಪೂಜೆಕೈಂಕರ್ಯಗಳನ್ನು ಆಯೋಜಿಸಲಾಗಿದೆ.ಶುಕ್ರವಾರ ಬೆಳಿಗ್ಗೆ 10ಕ್ಕೆ ಧ್ವಜಾರೋಹಣ, 12.30ಕ್ಕೆ ಅಮ್ಮನವರಿಗೆ ಕಂಕಣ ಕಟ್ಟುವುದು, 3ಕ್ಕೆ ಬೇವಿನ ಕರಗ ಮೆರವಣಿಗೆ. ಭಾನುವಾರ (ಆ.4) ಬೆಳಿಗ್ಗೆ 7.30ಕ್ಕೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪೆರುಮಾಳ್ ದೇವಾಲಯದಿಂದ ಹಾಲಿನ ಕುಂಡದ ಮೆರವಣಿಗೆ ಆರಂಭ. 9ಕ್ಕೆ ಹಾಲಿನ ಅಭಿಷೇಕ, ಮಹಾಮಂಗಳಾರತಿ, ಅನ್ನದಾನ.ಶುಕ್ರವಾರ (ಆ.9) ಮಧ್ಯಾಹ್ನ 12ಕ್ಕೆ ವಿಶೇಷ ಪೂಜೆ. ಸಂಜೆ 7.30ಕ್ಕೆ ಹಸಿ ಕರಗ ಮೆರವಣಿಗೆ. ಭಾನುವಾರ (ಆ.11) ಬೆಳಿಗ್ಗೆ 10ಕ್ಕೆ ವಿಶೇಷ ಪೂಜೆ, ಅಲಂಕಾರ. ಸಂಜೆ 6ಕ್ಕೆ ಅಮ್ಮನವರ ಮೆರವಣಿಗೆ. ರಾತ್ರಿ 8ಕ್ಕೆ ಕುಂಭ ಪೂಜೆ. ಸೋಮವಾರ (ಆ.12) ಬೆಳಿಗ್ಗೆ ಅಮ್ಮನವರಿಗೆ ಮಂಗಳಸ್ನಾನ, ಶಾಂತಿ ಪೂಜೆ, ಸಂಜೆ 6ಕ್ಕೆ ಮಹಾಮಂಗಳಾರತಿ. ಸ್ಥಳ:11ನೇ ಬೀದಿ, ಎಂ.ವಿ. ಗಾರ್ಡನ್, ಹಲಸೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry