ನಾಳೆಯಿಂದ ಕಣ್ಣಿನ ಪೊರೆ ತಪಾಸಣೆ

7

ನಾಳೆಯಿಂದ ಕಣ್ಣಿನ ಪೊರೆ ತಪಾಸಣೆ

Published:
Updated:

ಹೊಸಕೋಟೆ: ಇಲ್ಲಿನ ಜಿಇಎಫ್ ಕಣ್ಣಿನ ಆಸ್ಪತ್ರೆಯಲ್ಲಿ ಇದೇ 4, 11, 18 ಮತ್ತು 25 ರಂದು ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ನಡೆಸಲಾಗುವುದು. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದ್ದು, ಅವಶ್ಯಕತೆ ಇರುವವರಿಗೆ ನಂತರ ಡಾ. ಸುಂದರರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಬೆಂಗಳೂರಿನ ಗ್ಲೋಬ್ ಐ ಫೌಂಡೇಷನ್‌ನ ಆಶ್ರಯದಲ್ಲಿ ಶಿಬಿರ ನಡೆಯಲಿದ್ದು ಸಾರ್ವಜನಿಕರು ಪ್ರಯೋಜನ ಪಡೆಯುವಂತೆ ಪ್ರಕಟಣೆ ತಿಳಿಸಿದೆ.ರಾಜ್ಯ ಮಟ್ಟಕ್ಕೆ ಆಯ್ಕೆ: ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಇತ್ತೀಚೆಗೆ ದೇವನಹಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೆಡಾಕೂಟದಲ್ಲಿ ತಾಲ್ಲೂಕಿನ ನಂದಗುಡಿ ಸರ್ಕಾರಿ ಪ್ರೌಢಶಾಲೆಯ ಎನ್.ಎಂ.ನವೀನ್ ಕುಮಾರ್, ಜಾವೆಲಿನ್ ಮತ್ತು ಷಾಟ್‌ಪುಟ್‌ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಆಗಿದ್ದಾರೆ.ತಾವರೆಕೆರೆ ಪ್ರೌಢಶಾಲೆಯ ಎಚ್.ಎಸ್.ನವೀನ್ ಕುಮಾರ್ ಶ್ರವಣ ನ್ಯೂನತೆ ವಿಭಾಗದ ಜಾವೆಲಿನ್ ಎಸೆತದಲ್ಲಿ ಪ್ರಥಮ, ದೃಷ್ಟಿ ನ್ಯೂನತೆ ವಿಭಾಗದಲ್ಲಿ ಎಂ.ದಿಲೀಪ್ ಮತ್ತು ಎಂ.ಕಾವ್ಯ ಜಾವೆಲಿನ್ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry