ಬುಧವಾರ, ಮೇ 18, 2022
28 °C

ನಾಳೆಯಿಂದ ಡಯಾಬಿಟಿಸ್ ಹತೋಟಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಧರ್ಮಸ್ಥಳ ಸಮೀಪದ ಉಪ್ಪಿನಂಗಡಿಯ ಮೂಲಿಕಾವನ `ಕೈಲಾರು~ ಸಂಸ್ಥೆಯ ವತಿಯಿಂದ ಡಯಾಬಿಟಿಸ್ ಹತೋಟಿ ಅಭಿಯಾನದ ಅಂಗವಾಗಿ, ಇನ್ಸುಲಿನ್ `ಎ~ ಗಿಡ ಮತ್ತು ಇನ್ಸುಲಿನ್ `ಎ~ ಹರ್ಬಲ್ ಪುಡಿಯ ಪ್ರದರ್ಶನ ಮತ್ತು ಮಾಹಿತಿ ಶಿಬಿರ ನಗರದ ವನಿತಾ ಸಮಾಜದಲ್ಲಿ ಅ. 15ರಿಂದ 17ರವರೆಗೆ ನಡೆಯಲಿದೆ.ನಗರದಲ್ಲಿ 2ನೇ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಕ್ಕರೆ ಕಾಯಿಲೆ ಉಳ್ಳವರಿಗೆ ಇದು ಉಪಯುಕ್ತವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕೆ. ಸತ್ಯನಾರಾಯಣ ಭಟ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅ. 15ರಂದು ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, ವನಿತಾ ಸಮಾಜದ ಅಧ್ಯಕ್ಷೆ ನಾಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸುವರು. ನಗರದ ಆಯುರ್ವೇದ ವ್ಯಾಪಾರಿ ಪ್ರೊ.ಎ.ವೈ. ಕಾರ್ತಿಕ್ ಭಾಗವಹಿಸುವರು. ಅ. 16 ಮತ್ತು 17ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನ ಮತ್ತು ಮಾಹಿತಿ ಶಿಬಿರ ನಡೆಯುವುದು ಎಂದು ವಿವರಿಸಿದರು.ಸಕ್ಕರೆ ಕಾಯಿಲೆಯಿಂದ ಬಹಳಷ್ಟು ಜನ ಬಳಲುತ್ತಿದ್ದು, ಇನ್ಸುಲಿನ್ `ಎ~ ಕೊಸ್ಟಸ್ ಇಗ್ನೇಯಸ್~ ಎಂಬ ಶಾಸ್ತ್ರೀಯ ಹೆಸರುಳ್ಳ ದಕ್ಷಿಣ ಆಫ್ರಿಕಾ ಮೂಲದ ಇನ್ಸುಲಿನ್ `ಎ~ ಎಂಬ ಸಸ್ಯ ಈ ಕಾಯಿಲೆಗೆ ದಿವ್ಯ ಔಷಧಿಯಾಗಿದೆ. ಈ ಸಸ್ಯದ ಎಲೆಗಳನ್ನು ದಿನವೂ ತಿನ್ನುವುದರಿಂದ ಕಾಯಿಲೆಯನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಡಬಹುದು ಎಂದು ಮಾಹಿತಿ ನೀಡಿದರು.ಈ ಎಲೆ ತಿನ್ನುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಬೊಜ್ಜು ಕರಗುತ್ತದೆ. 4 ವರ್ಷಗಳಿಂದ ತಮ್ಮ ಸಂಸ್ಥೆಯ ವತಿಯಿಂದ ಅಭಿಯಾನದ ಮೂಲಕ ಈ ವಿಚಾರವಾಗಿ ಜನರಲ್ಲಿ ಅರಿವು ಮೂಡಿಸುತ್ತ ಬರಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ಇದುವರೆಗೆ 50 ಸಾವಿರಕ್ಕೂ ಹೆಚ್ಚು ಜನ ಇದರ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.ಈ ಸಸ್ಯದ ಬೆಲೆ ್ಙ 150 ಹಾಗೂ ಇದರ ಪುಡಿಯನ್ನು ಈ ಕಾರ್ಯಕ್ರಮದಲ್ಲಿ ್ಙ 100ಗೆ ನೀಡಲಾಗುವುದು. ಈ ಸಸ್ಯವನ್ನು ಮನೆಯಂಗಳದಲ್ಲೇ ಬೆಳೆಸಲು ಸಾಧ್ಯವಿದೆ ಎಂದು ತಿಳಿಸಿದರು. ಮಾಹಿತಿಗೆ ಮೊ: 94803 45170 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಸಂಸ್ಥೆಯ ಯು.ಟಿ. ರೈಸ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.