ನಾಳೆಯಿಂದ ದುರಸ್ತಿ: ಹಲವು ರೈಲು ರದ್ದು

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ನಾಳೆಯಿಂದ ದುರಸ್ತಿ: ಹಲವು ರೈಲು ರದ್ದು

Published:
Updated:

ಹುಬ್ಬಳ್ಳಿ: ಮೈಸೂರು ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ದುರಸ್ತಿ ಕಾರ್ಯದ  ಕಾರಣ ಇದೇ 15ರಿಂದ 18ರವರೆಗೆ ರೈಲುಗಳ ಸಂಚಾರವನ್ನು ಪೂರ್ಣ ಇಲ್ಲವೆ ಭಾಗಶಃ ರದ್ದುಪಡಿಸಲು ನೈರುತ್ಯ ರೈಲ್ವೆ ವಲಯ ತೀರ್ಮಾನಿಸಿದೆ.ಮೈಸೂರು-ಚಾಮರಾಜನಗರ ಪ್ಯಾಸೆಂಜರ್ (56210) ರೈಲು ಸಂಚಾರವನ್ನು 15ರಿಂದ 18ರವರೆಗೆ ಸಂಪೂರ್ಣ ರದ್ದುಗೊಳಿಸಲಾಗಿದೆ. ಬೆಂಗಳೂರು-ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು (ನಂ. 56232/ 56237) ನಾಗನಹಳ್ಳಿವರೆಗೆ ಮಾತ್ರ ಸಂಚರಿಸುತ್ತದೆ.  ನಾಗನಹಳ್ಳಿಯಿಂದ ಮೈಸೂರು ವರೆಗಿನ ಇದರ ಸಂಚಾರವನ್ನು ಈ ನಾಲ್ಕು ದಿನಗಳ ಅವಧಿಯಲ್ಲಿ ತಡೆಹಿಡಿಯಲಾಗಿದೆ.ಬೆಂಗಳೂರು-ಮೈಸೂರು-ಯಶವಂತಪುರ (ನಂ. 16558/ 16559) ಎಕ್ಸ್‌ಪ್ರೆಸ್ ರೈಲು ಈ ನಾಲ್ಕು ದಿನಗಳ ಅವಧಿಯಲ್ಲಿ ಪಾಂಡವಪುರದವರೆಗೆ ಮಾತ್ರ ಸಂಚರಿಸಲಿದೆ. 

 

ಯಶವಂತಪುರ-ಮೈಸೂರು -ಬೆಂಗಳೂರು (ನಂ. 16560/ 16557) ಎಕ್ಸ್‌ಪ್ರೆಸ್ ರೈಲು ನಾಗನಹಳ್ಳಿವರೆಗೆ ಓಡಲಿದೆ.ಅರಸೀಕೆರೆ -ಮೈಸೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್ (56267/56270) ಮೈಸೂರು ಬದಲು ಬೆಳಗೊಳದಿಂದ ಹೊರಡಲಿದೆ. ಶಿವಮೊಗ್ಗ ಟೌನ್-ಮೈಸೂರು-ಅರಸೀಕೆರೆ ಪ್ಯಾಸೆಂಜರ್ (ನಂ. 56269/ 56268) ಬೆಳಗೊಳದವರೆಗೆ ಮಾತ್ರ ಸಂಚರಿಸಲಿದೆ. ಚಾಮರಾಜನಗರ-ತಿರುಪತಿ ಪ್ಯಾಸೆಂಜರ್ ರೈಲು (ನಂ. 56213) ಚಾಮರಾಜನಗರ ಹಾಗೂ ಮೈಸೂರು ನಿಲ್ದಾಣಗಳ ಮಧ್ಯೆ ಸಂಚರಿಸುವುದಿಲ್ಲ.ಚಾಮರಾಜನಗರ-ಮೈಸೂರು ಪ್ಯಾಸೆಂಜರ್ (ನಂ. 56203), ಮೈಸೂರು-ನಂಜನಗೂಡು ಟೌನ್ ಪ್ಯಾಸೆಂಜರ್ (ನಂ. 06215) ಮತ್ತು ಚಾಮರಾಜನಗರ-ಮೈಸೂರು ಪ್ಯಾಸೆಂಜರ್ (ನಂ. 56209) ರೈಲುಗಳು ಅಶೋಕಪುರ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry