ಶುಕ್ರವಾರ, ಜೂನ್ 25, 2021
29 °C

ನಾಳೆಯಿಂದ ಬೆತ್ತಲೆ ಹರಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಭೂಮಿ ಚಟುವಟಿಕೆಗಳಲ್ಲಿ ಕೆಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಉತ್ಸಾಹಿ ಯುವಕಲಾವಿದರು ಸೇರಿ ಕಟ್ಟಿರುವ ರಂಗತಂಡ `ಸಿರಿಸಂಭ್ರಮ~. ಹೊಸ ಪ್ರಕಾರದ ನಾಟಕಗಳಿಗೆ ಒತ್ತುಕೊಟ್ಟು, ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವುದು ಈ ತಂಡದ ಉದ್ದೇಶ.ಡಾ. ದಿವಸ್ಪತಿ ಹೆಗಡೆ ರಚಿಸಿರುವ `ಬೆತ್ತಲೆ ಹರಕೆ~ ನಾಟಕ ಇದೇ 21, 22 ಹಾಗೂ 24ರಂದು ಪ್ರದರ್ಶನಗೊಳ್ಳಲಿದೆ. ಚಂದ್ರಗುತ್ತಿಯಲ್ಲಿ ಪ್ರಚಲಿತದಲ್ಲಿದ್ದ ಜಾನಪದ ಕಥೆಯನ್ನು ಆಧಾರವಾಗಿಟ್ಟುಕೊಂಡು ಈ ನಾಟಕ ರಚಿಸಲಾಗಿದೆ.ಚಂದ್ರಗುತ್ತಿ ಎಂಬ ಪ್ರದೇಶವನ್ನು ಮಹಾರಾಣಿಯೊಬ್ಬಳು ಸಾಮಂತಿಕೆ ಮಾಡಿಕೊಂಡಿರುತ್ತಾಳೆ. ವಯಸ್ಸಿಗೆ ಬಂದ ಮಗನನ್ನು ಮದುವೆ ಮಾಡಿಸಿ ಪಟ್ಟಕಟ್ಟಬೇಕೆಂಬ ಉತ್ಸಾಹ ಆಕೆಯದು. ಆದರೆ ಯುವರಾಜನಿಗೆ ವಿಚಿತ್ರ ಮಾನಸಿಕ ದೌರ್ಬಲ್ಯ.

 

ಮುಂದೆ ಏನಾಗುತ್ತದೆ ಎಂಬ ಕುತೂಹಲ ಅಡಗಿಸಿಟ್ಟುಕೊಂಡ ನಾಟಕವಿದು.

ಮಹೇಶ್ ಎಸ್.ಪಲ್ಲಕ್ಕಿ ನಾಟಕ ನಿರ್ದೇಶಿಸಿದ್ದು, ವೆಂಕಟೇಶ ಜೋಶಿ ಸಂಗೀತ ನೀಡಿದ್ದಾರೆ. ಮಹಾದೇವಸ್ವಾಮಿ ಅವರ ಬೆಳಕಿನ ವಿನ್ಯಾಸವಿದೆ.ಬುಧವಾರ ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಸುಮತೀಂದ್ರ ನಾಡಿಗ್, ರಂಗಭೂಮಿ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು.24ರಂದು ಸಮಾರೋಪದಲ್ಲಿ ಪತ್ರಕರ್ತರಾದ ಎಂ.ಕೆ.ಭಾಸ್ಕರ್, ಈಶ್ವರ ದೈತೋಟ ಭಾಗವಹಿಸಲಿದ್ದಾರೆ.ಸ್ಥಳ: ಕೆ.ಎಚ್.ಕಲಾಸೌಧ, ಹನುಮಂತ ನಗರ, ರಾಮಾಂಜನೇಯ ಗುಡ್ಡದ ಹಿಂಭಾಗ. ಸಂಜೆ 6.30. ಟಿಕೆಟ್‌ಗೆ: 9902892880. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.