ಗುರುವಾರ , ಜೂನ್ 24, 2021
21 °C

ನಾಳೆಯಿಂದ ಮಯ್ಯೊಸ್ ರಂಗಾವಳಿ ನಗೆ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮಾರ್ಚ್ 2ರಿಂದ 4ರವರೆಗೆ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ. 2ರಿಂದ ಪ್ರತಿ ದಿನ ಸಂಜೆ 6.30ಕ್ಕೆ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಾಟಕೋತ್ಸವ ನಡೆಯಲಿದೆ. ಮಾರ್ಚ್ 2ರಂದು ರಾಶಿಚಕ್ರ, ಮಾ.3ರಂದು `ಒಂದ ಆಟ ಭಟ್ಟರದು~ ಹಾಗೂ ಮಾ. 4ರಂದು `ಆಲ್ ದಿ ಬೆಸ್ಟ್~ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.ಪ್ರವೇಶ ಉಚಿತವಾಗಿದ್ದು, ಉಚಿತ ಪ್ರವೇಶ ಪತ್ರಗಳಿಗೆ ಜೆ.ಸೋಮಣ್ಣ (9448648607), ಟಿ.ಪಿ.ರಮೇಶ್ (9448422511) ಹಾಗೂ ಅಶ್ರಫ್ (9448217102) ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.ನಗೆ ನಾಟಕೋತ್ಸವವು ಹುಬ್ಬಳ್ಳಿಯ ಗುರುಸಂಸ್ಥೆ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಳಗ ಮತ್ತು ಮಡಿಕೇರಿಯ ಕೆ.ಎಂ.ಟ್ರೇಡರ್ಸ್‌ ಆಶ್ರಯದಲ್ಲಿ ನಡೆಯಲಿದೆ ಎಂದರು.ಹುಬ್ಬಳ್ಳಿಯ ಗುರು ಸಂಸ್ಥೆಯು ರಾಜ್ಯಾದ್ಯಂತ ಮಯ್ಯೊಸ್ ರಂಗಾವಳಿ ಎನ್ನುವ ನಗೆ ನಾಟಕೋತ್ಸವವನ್ನು ಆಯೋಜಿಸುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಬಂದ ಪ್ರತಿಭಾವಂತ ಕಲಾವಿದರೊಂದಿಗೆ ಕಲಾವಿದ ಯಶವಂತ ಸರದೇಶಪಾಂಡೆ, ಮಾಲತಿ ಸರದೇಶಪಾಂಡೆ, ಸುನೇತ್ರ ಪಂಡಿತ್  ಪಾತ್ರ ವಹಿಸಲಿದ್ದಾರೆ ಎಂದರು.

 

ಸ್ವಸ್ಥ ಆಹಾರ ಅಭಿರುಚಿಯ ಡಾ.ಪಿ.ಸದಾನಂದ ಮಯ್ಯ ಹಾಗೂ ಅವರ ಪುತ್ರ ಸುದರ್ಶನ ಮಯ್ಯರು ಹುಟ್ಟು ಹಾಕಿರುವ ಮಯ್ಯೊಸ್ ಸಂಸ್ಥೆಯ ರುಚಿಕರ ಆಹಾರ ಉತ್ಪನ್ನಗಳನ್ನು ಪರಿಚಯಿಸುವುದು ಕೂಡ ಈ ಕಾರ್ಯಕ್ರಮದ ಭಾಗವಾಗಿದೆ ಎಂದು ತಿಳಿಸಿದರು.

 

ಮೊದಲಿಗೆ ಬೆಂಗಳೂರಿಗೆ ಸೀಮಿತವಾಗಿದ್ದ ಈ ತಂಡದ ಕಾರ್ಯಕ್ರಮವನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಲಾವಿದ ರಘು ಅಶ್ವತಪ್ಪ ಹಾಗೂ ನಗರಸಭಾ ಸದಸ್ಯ ಅಶ್ರಫ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.