ನಾಳೆಯಿಂದ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್

7

ನಾಳೆಯಿಂದ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್

Published:
Updated:

ಬೆಂಗಳೂರು: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ಫೆಬ್ರುವರಿ 23ರಿಂದ 26ರವರೆಗೆ 33ನೇ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಹಾಗೂ ಎರಡನೇ ಅಂತರರಾಷ್ಟ್ರೀಯ ಹಿರಿಯರ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಜರುಗಲಿದೆ.ಕಂಠೀರವ ಕ್ರೀಡಾಂಗಣದಲ್ಲಿ ನಾಲ್ಕು ದಿನ ನಡೆಯಲಿರುವ ಈ ಕೂಟದಲ್ಲಿ 26 ರಾಜ್ಯಗಳ 3200 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಅಂತರರಾಷ್ಟ್ರೀಯ ಹಿರಿಯರ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಶ್ರೀಲಂಕಾ, ಮಲೇಷ್ಯಾ ಹಾಗೂ ನೇಪಾಳದಿಂದ ನೂರು ಮಂದಿ ಅಥ್ಲೀಟ್‌ಗಳು ಆಗಮಿಸಲಿದ್ದಾರೆ.`35 ವರ್ಷ ಮೇಲ್ಪಟ್ಟ ಅಥ್ಲೀಟ್‌ಗಳು ಇಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್‌ನಲ್ಲಿ ತೈಪೆಯಲ್ಲಿ ನಡೆಯಲಿರುವ 17ನೇ ಏಷ್ಯನ್ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡದ ಆಯ್ಕೆಗೆ ಈ ಕೂಟ ಮಾನದಂಡವಾಗಲಿದೆ~ ಎಂದು ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಉಪಾಧ್ಯಕ್ಷ ಹಾಗೂ ಸಂಘಟನಾ ಸಮಿತಿ ಮುಖ್ಯಸ್ಥ ಆದಿನಾಥ್ ನಾರ್ಡೆ ತಿಳಿಸಿದರು.ಈ ಕೂಟವನ್ನು ವೀಕ್ಷಿಸಲು ವಿಶ್ವ ಹಿರಿಯರ ಅಥ್ಲೆಟಿಕ್ ಫೆಡರೇಷನ್ ಅಧ್ಯಕ್ಷ ಸ್ಟ್ಯಾನ್ ಪೆರ್ಕಿನ್ಸ್ ಹಾಗೂ ಕಾರ್ಯದರ್ಶಿ ವಿನ್‌ಸ್ಟನ್ ಥಾಮಸ್ ಆಗಮಿಸಲಿದ್ದಾರೆ. 2010ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ 16ನೇ ಏಷ್ಯನ್ ಹಿರಿಯರ ಅಥ್ಲೆಟಿಕ್ ಕೂಟದಲ್ಲಿ 349 ಪದಕಗಳನ್ನು ಗೆದ್ದಿದ್ದ ಭಾರತ ಮೊದಲ ಸ್ಥಾನ ಗಳಿಸಿತ್ತು. `2015ರ ವಿಶ್ವ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಆಯೋಜಿಸಲು ಭಾರತ ಬಿಡ್ ಸಲ್ಲಿಸಲಿದೆ. 2013ರ ಕ್ರೀಡಾಕೂಟವನ್ನು ಬ್ರೆಜಿಲ್ ಆಯೋಜಿಸಲಿದೆ~ ಎಂದು ಅವರು ನುಡಿದರು.`ಅಥ್ಲೀಟ್‌ಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅಥ್ಲೀಟ್‌ಗಳು ಆಗಮಿಸುತ್ತಿದ್ದಾರೆ ಗುರುವಾರ ಮಧ್ಯಾಹ್ನ 2ಕ್ಕೆ ಉದ್ಘಾಟನೆ  ನಡೆಯಲಿದೆ~ ಎಂದು ಸಂಘಟನಾ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry