ನಾಳೆಯಿಂದ ವಿದ್ಯಾರ್ಥಿ ಅಭಿಯಾನ

7

ನಾಳೆಯಿಂದ ವಿದ್ಯಾರ್ಥಿ ಅಭಿಯಾನ

Published:
Updated:

ಬೆಂಗಳೂರು: `ಪಾಶ್ಚಾತ್ಯ ಸಂಸ್ಕೃತಿಯ ವಿರುದ್ಧ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಸಂಸ್ಥೆಯು ಫೆ.17 ರಿಂದ 26 ತನಕ ಹತ್ತು ದಿನಗಳ ಅಭಿಯಾನವನ್ನು ನಡೆಸಲಿದೆ~ ಎಂದು ಕಾರ್ಯದರ್ಶಿ ಸೈಯ್ಯದ್ ಕಾಜೀಮ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ವಿದ್ಯಾರ್ಥಿಗಳೇ! ಎತ್ತ ಸಾಗುತ್ತಿರುವಿರಿ~ ಎಂಬ ಧ್ಯೇಯವಾಕ್ಯದಡಿಯಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳು ಬೀರುವ ದುಷ್ಪರಿಣಾಮಗಳ ಬಗ್ಗೆ ವಿದಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.`ಅಭಿಯಾನದಲ್ಲಿ ಬೇರೆ-ಬೇರೆ ಕಾಲೇಜುಗಳಿಗೆ ಭೇಟಿ ನೀಡಿ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅದರಲ್ಲಿ ಬೀದಿ ನಾಟಕ, ಭಿತ್ತಿ ಪತ್ರ, ಗೋಡೆ ಬರಹ, ಪುರವಣಿ, ಗುಂಪು ಚರ್ಚೆ, ಭಿತ್ತಿ ಪತ್ರ, ಚಾವಡಿ ಚರ್ಚೆ, ತರಗತಿ ಉಪನ್ಯಾಸ, ಕಿರುಚಿತ್ರ ಪ್ರದರ್ಶನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಹೇಳಿದರು.ಗೋಷ್ಠಿಯಲ್ಲಿ ಸಂಘಟನೆಯ ಉಮರ್ ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry