ನಾಳೆಯಿಂದ ವಿಶ್ವಶಾಂತಿ ಯಜ್ಞ

7

ನಾಳೆಯಿಂದ ವಿಶ್ವಶಾಂತಿ ಯಜ್ಞ

Published:
Updated:

ಚಿಕ್ಕೋಡಿ:  ಇಲ್ಲಿನ ಆದಿನಾಥ ದಿಗಂಬರ ಜೈನ ಮಂದಿರ ಟ್ರಸ್ಟ್ ಇಲ್ಲಿ ಇದೇ ಪ್ರಥಮ ಬಾರಿಗೆ ಕಲ್ಪದ್ರುಮ ಮಹಾಮಂಡಲ ಆರಾಧನೆ ಮತ್ತು ವಿಶ್ವಶಾಂತಿ ಮಹಾಯಜ್ಞ ಕಾರ್ಯಕ್ರಮವನ್ನು ಅ.13ರಿಂದ 23ರ ವರೆಗೆ ಹಮ್ಮಿಕೊಂಡಿದೆ. 

ಆರ್ಯಿಕಾ 105 ಆದಿತ್ಯಶ್ರೀ ಮಾತಾಜಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸ್ಥಳೀಯ ಆರ್.ಡಿ. ಪ್ರೌಢಶಾಲೆ ಆವಣರದಲ್ಲಿ ಭವ್ಯ ಮಂಟಪ  ನಿರ್ಮಿಸಲಾಗುತ್ತಿದೆ. ಆಚಾರ್ಯ ಗುಣಧರನಂದಿ ಮಹಾರಾಜ ಮತ್ತು ಆರ್ಯಿಕಾ ಮಾತಾಜಿಯವರ ಸಾನ್ನಿಧ್ಯದಲ್ಲಿ ಆರಾಧನಾ ಮಹೋತ್ಸವ ನಡೆಯಲಿದ್ದು, 11 ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.

ಬಾಳಾಸಾಹೇಬ ಸಂಗ್ರೋಳೆ ಮತ್ತು ನಿರ್ಮಲಾ ದಂಪತಿ ಆರಾಧನೆಯ ಸೌಧರ್ಮ ಇಂದ್ರ-ಇಂದ್ರಾಯಣಿ (ಯಜಮಾನ ದಂಪತಿ)ಯಾಗಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  ಅ.13ರಂದು ಬೆಳಿಗ್ಗೆ ಶ್ರೀಗಳ ರಥಯಾತ್ರೆ ನಡೆಯಲಿದ್ದು, ಶಾಂತಪ್ಪಣ್ಣ ಮಿರಜಿ ಧ್ವಜಾರೋಹಣ ನೇರವೇರಿಸಲಿದ್ದಾರೆ. ವೈ.ಕೆ. ರೋಖಡೆ ಮಂಟಪ ಪೂಜೆ  ಸಲ್ಲಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry