ಬುಧವಾರ, ಅಕ್ಟೋಬರ್ 16, 2019
21 °C

ನಾಳೆಯಿಂದ ಸಂಜೀವಿನಿ ಆರೋಗ್ಯ ಉತ್ಸವ

Published:
Updated:

ಬೆಂಗಳೂರು: ನಗರದ ಪುರಭವನದಲ್ಲಿ ಜ. 16ರಿಂದ 18ರವರೆಗೆ ಮೂರು ದಿನಗಳ `ಸಂಜೀವಿನಿ ಆರೋಗ್ಯ ಉತ್ಸವ~ ಹಮ್ಮಿಕೊಳ್ಳಲಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಇರುವ ಸಾರ್ವಜನಿಕರು, ವೈದ್ಯರು ಹಾಗೂ ಆಸ್ಪತ್ರೆಗಳ ಮುಖ್ಯಸ್ಥರನ್ನು ಒಂದೇ ವೇದಿಕೆಯಡಿ ಸೇರಿಸುವುದು ಈ ಉತ್ಸವದ ಮುಖ್ಯ ಉದ್ದೇಶವಾಗಿದೆ.ಈ ಉತ್ಸವದಲ್ಲಿ ಆರೋಗ್ಯ ಸಂಬಂಧಿ ಸಂದೇಹಗಳಿಗೆ ತಜ್ಞ ವೈದ್ಯರಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಜೀವನ ಶೈಲಿಯ ಬದಲಾವ ಣೆಯಿಂದ ಕಾಣಿಸಿಕೊಳ್ಳುತ್ತಿರುವ ಮೂತ್ರಪಿಂಡ ಸಮಸ್ಯೆ, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು, ಲೈಂಗಿಕ ಸಮಸ್ಯೆಗಳು ಮತ್ತು ಪೋಷಕಾಂಶಗಳ ಸಮಸ್ಯೆಗಳ ಬಗ್ಗೆ ನುರಿತ ವೈದ್ಯರಿಂದ ಉತ್ತರ ಪಡೆಯಬಹುದು.ಮೂರು ದಿನಗಳ ಕಾಲ ನಡೆಯುವ ಸಂಜೀವಿನಿ ಆರೋಗ್ಯ ಉತ್ಸವದಲ್ಲಿ ಪ್ರತಿ ದಿನ ಎರಡು ಗಂಟೆಯಂತೆ ಒಟ್ಟು ಒಂಬತ್ತು ಸಂವಾದ ಗೋಷ್ಠಿಗಳು ನಡೆಯಲಿವೆ. ಉತ್ಸವದಲ್ಲಿ ಭಾಗವಹಿಸಲು ಇಚ್ಛಿಸುವವರು ಬಸವನಗುಡಿ ಮತ್ತು ಶಾಂತಿನಗರದ ಶಾಸಕರ ಕಚೇರಿಗಳಲ್ಲಿ ಪಾಸ್‌ಗಳನ್ನು ಪಡೆಯಬಹುದು. ಹೆಸರು ನೋಂದಾಯಿಸಲು ಮೊಬೈಲ್ ಸಂಖ್ಯೆ: 98864 64641 ಸಂಪರ್ಕಿಸಬಹುದು.

Post Comments (+)