ಮಂಗಳವಾರ, ನವೆಂಬರ್ 19, 2019
28 °C

ನಾಳೆಯಿಂದ ಸುಶಮೀಂದ್ರರ ಸಮಾರಾಧನೆ

Published:
Updated:

ರಾಯಚೂರು: ಮಂತ್ರಾಲಯದಲ್ಲಿ  ಶ್ರೀ ರಾಘವೇಂದ್ರ ಸ್ವಾಮಿ ಮಠದ ಹಿಂದಿನ ಪೀಠಾಧಿಪತಿ ಶ್ರೀ ಸುಶಮೀಂದ್ರ ತೀರ್ಥರ 5ನೇ ಮಹಾ ಸಮಾರಾಧನೆ ಇದೇ 24ರಿಂದ 28ರವರೆಗೆ ನಡೆಯಲಿದೆ. ಶ್ರೀಮಠದ ಪೀಠಾಧಿಪತಿ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.24ರಿಂದ 28ವರೆಗೆ ಬೆಳಿಗ್ಗೆ 9.30ರಿಂದ 10.45 ವರೆಗೆ ಡೋಲೋತ್ಸವ ಮಂಟಪದಲ್ಲಿ ವಿವಿಧ ವಿದ್ವಾಂಸರಿಂದ ಪ್ರವಚನ ಮಾಲಿಕೆ ನಡೆಯಲಿದೆ. 24ರಂದು ಬ್ರಹ್ಮಸೂತ್ರ ಭಾಷ್ಯ ಮಂಗಳ ಕಾರ್ಯಕ್ರಮ ನಡೆಯಲಿದೆ. 27 ಮತ್ತು 28ರಂದು ವೇದಾಂತ ಮತ್ತು ನ್ಯಾಯಶಾಸ್ತ್ರ ಕುರಿತ ಪರೀಕ್ಷೆ ನಡೆಯಲಿದೆ.ಪ್ರಶಸ್ತಿ ಪ್ರದಾನ: ಮಹಾ ಸಮಾರಾಧನಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ಪ್ರಸಸ್ತಿ ಪ್ರದಾನ ಮಡಲಾಗುವುದು.

ಪುರಸ್ಕೃತರ ವಿವರ ಈ ಕೆಳಗಿನಂತಿದೆ.ಶ್ರೀ ಸುಶಮೀಂದ್ರ ಪ್ರಶಸ್ತಿ: ರಾಜಸ್ತಾನದ ಜೈಪುರ ವಿಶ್ವವಿದ್ಯಾಲಯದ ದ್ವೈತ ವೇದಾಂತ ವಿಭಾಗದ ಮುಖ್ಯಸ್ಥ  ಡಾ.ವೆಂಕಟರಮಣ ಆಚಾರ್ಯ ಹಾಗೂ ತಿರುಪತಿ ತಿರುಮಲ ದೇವಸ್ಥಾನದ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಪಿ.ವಿ.ಆರ್.ಕೆ ಪ್ರಸಾದ.ಶ್ರೀ ಸುಶಮೀಂದ್ರ ಪುರಸ್ಕಾರ: ದ್ವೈತ ವೇದಾಂತ ಕ್ಷೇತ್ರದಲ್ಲಿ ಮಂತ್ರಾಲಯದ ಗುಂಜಹಳ್ಳಿ ವಾಸುದೇವಾಚಾರ್ಯ, ಬೆಮ್ಮಟ್ಟಿಯ ವಿದ್ವಾನ್ ಬಿ.ಎನ್ ಸೀತಾರಾಮಾಚಾರ್ಯ, ಬೆಂಗಳೂರಿನ ಡಾ.ಮಾದನೂರು ನಾರಾಯಣಾಚಾರ್ಯ, ಬಾಗಲಕೋಟೆಯ ವಿದ್ವಾನ್ ಬಿಂದಾಚಾರ್ಯ ನಾಗಸಂಪಿಗೆ.ಸಂಸ್ಕೃತ ಸಾಹಿತ್ಯ: ಬೆಂಗಳೂರಿನ ವಿದ್ವಾನ್ ಮಹಾಬಲೇಶ್ವರ ಭಟ್, ಪಾಲಮೂರಿನ ವಿದ್ವಾನ್ ವೇದಂ ಸತ್ಯನಾರಾಯಣ ಶರ್ಮಾ, ಉಡುಪಿಯ ಲಕ್ಷ್ಮೀನಾರಾಯಣ ಶರ್ಮಾ, ಬೆಂಗಳೂರಿನ ಎಸ್.ಟಿ ನಾಗರಾಜ ಶರ್ಮಾ.ಹರಿದಾಸ ಸಾಹಿತ್ಯ: ಮಂಡ್ಯದ ಕಗವರಧ್ವಜ ವಿಠಲ ದಾಸರು, ಪುರಂದರ ಆಶ್ರಮದ ಹನುಮಂತರಾವ್, ಹೈದರಾಬಾದ್‌ನ ಸರಳಾ ಬಾಯಿ, ಜಮಖಂಡಿಯ ವಾದಿರಾಜ ದೇಶಪಾಂಡೆ, ಚೆನ್ನೈನ ಯಮುನಾ ಬಾಯಿ ರಾಮರಾವ್.ಮಾಧ್ಯಮ ಕ್ಷೇತ್ರ: ಬಾಗಲಕೋಟೆ ಸಚಿನ್ ದೇಸಾಯಿ, ಚೆನ್ನೈನ ಹರಿಕೇಶನಲ್ಲೂರು ವೆಂಕಟರಾಮಣ, ಬೆಂಗಳೂರಿನ ರಘುರಾಮ, ಅನಂತಪುರದ ನಾಗಭೂಷಣ.ಸಮಾಜ ಸೇವಾ ಕ್ಷೇತ್ರ: ಕರ್ನೂಲ್‌ನ ನ್ಯಾಯಮೂರ್ತಿ ಪಿ.ನಾರಾಯಣ ರೆಡ್ಡಿ, ಅದೋನಿಯ ಮಕ್ಕಳ ತಜ್ಞ ಡಾ.ರಘುನಾಥ, ಭೀಮಾವರಂನ  ವೇಣುಗೋಪಾರಾಜು, ಮಂತ್ರಾಲಯದ ಮಡ್ಡಿಲೆಟಿ ಕುರುವಾ, ಬಳ್ಳಾರಿಯ ಆರ್.ವಿ ಚಲಪತಿ, ತಂಜಾವೂರು ಎಸ್.ಸುರೇಶ ಕುಮಾರ.ಸಂಗೀತ ಕ್ಷೇತ್ರ: ರಾಯಚೂರಿನ ವಿ.ಎಂ. ಜೋಶಿ, ಚೆನ್ನೈನ ಎ.ಎಸ್ ಮುರಳಿ, ಬೆಂಗಳೂರಿನ ಶಿವಮೊಗ್ಗ ಸುಬ್ಬಣ್ಣ, ಮೈಸೂರಿನ ಆರ್.ಎಸ್ ನಂದಕುಮಾರ ಹಾಗೂ ಸೂಡಿಯ ಗಜಾನನ ಸಂಸ್ಕೃತ ಪಾಠಶಾಲೆ, ಅನಂತಪುರ ಎಂ.ಆರ್ ಶಿಕ್ಷಣ ಸಂಸ್ಥೆ.ಸಾಂಸ್ಕೃತಿಕ ಕಾರ್ಯಕ್ರಮಗಳು: ಶ್ರೀ ಸುಶಮೀಂದ್ರ ತೀರ್ಥರ ಮಹಾಸಮಾರಾಧನಾ ಮಹೋತ್ಸವದಲ್ಲಿ 24ರಂದು ಬೆಂಗಳೂರಿನ ಧನಲಕ್ಷ್ಮೀ, 25ರಂದು ಬಳ್ಳಾರಿಯ ಸ್ಮಿತಾ ಅವರಿಂದ,  26ರಂದು ವಾಣಿ ಹರ್ಡೀಕರ್,  27ರಂದು ಬೆಂಗಳೂರಿನ ಭಾರತಿ ಪ್ರತಾಪ, 28ರಂದು ಬೆಂಗಳೂರಿನ ಪ್ರಸನ್ನ ಕೊರ್ತಿ ಅವರಿಂದ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಯಲಿವೆ. ಈ ಮಹೋತ್ಸವದಲ್ಲಿ ಸುಯತೀಂದ್ರ ತೀರ್ಥ ಶ್ರೀಪಾದಂಗಳವರು ಮಂತ್ರಾಲಯದಲ್ಲಿ ನಿರ್ಮಿಸಿದ  ಶ್ರೀ ಯೋಗೀಂದ್ರ ಮಾರ್ಗವನ್ನು ಉದ್ಘಾಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)