ನಾಳೆ ಎನ್.ಟಿ.ಆರ್ ಪ್ರಶಸ್ತಿ ಪ್ರದಾನ

ಬುಧವಾರ, ಜೂಲೈ 17, 2019
26 °C

ನಾಳೆ ಎನ್.ಟಿ.ಆರ್ ಪ್ರಶಸ್ತಿ ಪ್ರದಾನ

Published:
Updated:

ಬೆಂಗಳೂರು: `ಕರ್ನಾಟಕ ತೆಲುಗು ಅಕಾಡೆಮಿಯು ಚಿತ್ರನಟ ದಿವಂಗತ ಡಾ.ಎನ್.ಟಿ.ರಾಮರಾವ್ ಅವರ 89ನೇ ಜನ್ಮದಿನ ಮತ್ತು 2011ನೇ ಸಾಲಿನ ಎನ್.ಟಿ.ರಾಮರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕರ್ನಾಟಕ ತೆಲುಗು ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಸಿ.ವಿ.ಶ್ರೀನಿವಾಸಯ್ಯ ಹೇಳಿದರು.`ಜೂನ್ 6 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ (ಸಂಜೆ 5) ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಡಿ.ಪುರಂದರೇಶ್ವರಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ~ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.2011ನೇ ಸಾಲಿನ ಎನ್.ಟಿ.ರಾಮರಾವ್ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಚಿತ್ರನಟಿ ಡಾ.ಭಾರತಿ ವಿಷ್ಣುವರ್ಧನ್ ಮತ್ತು ನಟ ಶಿವರಾಜ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಡಾ.ಡಿ.ರಾಮನಾಯ್ಡು ಅವರನ್ನು ಸನ್ಮಾನಿಸಲಾಗುವುದು.ಕರ್ನಾಟಕ ತೆಲುಗು ಅಕಾಡೆಮಿ ಅಧ್ಯಕ್ಷ ಡಾ.ಎ.ರಾಧಾಕೃಷ್ಣ ರಾಜು, ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಭಾಗವಹಿಸ ಲಿದ್ದಾರೆ. ಕರ್ನಾಟಕ ತೆಲುಗು ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ರಾಧಾಕೃಷ್ಣ ರಾಜು ಉಪಸ್ಥಿತರಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry