ಮಂಗಳವಾರ, ಮೇ 18, 2021
22 °C

ನಾಳೆ ಚೌರಾಸಿಯಾ ಸಮಾಜದ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ಭಾರತ ಚೌರಸಿಯಾ ಸಮಾಜದ ಬೆಂಗಳೂರು ಶಾಖೆ ಇದೇ 9ರಂದು `ಬೆಂಗಳೂರು ಇಂಟರ್‌ನ್ಯಾಷನಲ್ ಹೋಟೆಲ್'ನಲ್ಲಿ ಅಖಿಲ ಭಾರತ ಮಹಾ ಸಮ್ಮೇಳನವನ್ನು ಏರ್ಪಡಿಸಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಖೆಯ ನಿರ್ದೇಶಕ ವಿಜಯ ಪ್ರಕಾಶ್ ಚೌರಸಿಯಾ, ಬೆಳಿಗ್ಗೆ 11.30ಕ್ಕೆ ಪ್ರಾರಂಭವಾಗುವ ಸಮೇಳನಕ್ಕೆ ದೇಶದ ವಿವಿಧೆಡೆಯಿಂದ ಜನರು ಬರಲಿದ್ದಾರೆ ಎಂದರು.ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಈ ಜನಾಂಗದವರ ಆರ್ಥಿಕ ಸ್ಥಿತಿಗತಿ, ವಿದ್ಯಾರ್ಹತೆ ಹಾಗೂ ಉದ್ಯೋಗಸ್ಥರ ಸಂಖ್ಯೆ ತಿಳಿಯಲು ಸಮೀಕ್ಷೆ ನಡೆಸುವ ಬಗ್ಗೆ, ಬಡ ಕುಟುಂಬಗಳಿಗೆ ಸ್ವ ಉದ್ಯಮ ಪ್ರಾರಂಭಿಸಲು ಹಣಕಾಸು ಸಹಾಯ ಮಾಡುವ ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.