ನಾಳೆ ದೇಶದೆಲ್ಲೆಡೆ ಬ್ಯಾಂಕ್ ಮುಷ್ಕರ

7

ನಾಳೆ ದೇಶದೆಲ್ಲೆಡೆ ಬ್ಯಾಂಕ್ ಮುಷ್ಕರ

Published:
Updated:

ನವದೆಹಲಿ (ಪಿಟಿಐ): ಸುಸ್ತಿ ಸಾಲ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮತ್ತು ಖಾಸಗಿ ವಲಯಕ್ಕೆ ಬ್ಯಾಂಕುಗಳ ಪ್ರಮುಖವಲ್ಲದ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡುವುದನ್ನು ವಿರೋಧಿಸಿ ಬ್ಯಾಂಕ್ ನೌಕರರ ಏಳು ಸಂಘಗಳು ಮಂಗಳವಾರ ದೇಶದಾದ್ಯಂತ ಮುಷ್ಕರ ನಡೆಸಲು ಕರೆ ನೀಡಿವೆ.ಇವುಗಳಲ್ಲದೆ, ಬ್ಯಾಂಕಿಂಗ್ ವಲಯದ ಸುಧಾರಣೆ, ಉದ್ಯೋಗಗಳ ಹೊರಗುತ್ತಿಗೆ ಸೇರಿದಂತೆ ಏಕಪಕ್ಷೀಯವಾಗಿ ಖಂಡೇಲ್‌ವಾಲ್ ಸಮಿತಿಯ ಶಿಫಾರಸುಗಳನ್ನು ಹೇರುತ್ತಿರುವುದರ ವಿರುದ್ಧ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry