ನಾಳೆ ನಗೆ ಜಾಗರಣೆ

7

ನಾಳೆ ನಗೆ ಜಾಗರಣೆ

Published:
Updated:

ಬೆಂಗಳೂರು: `ಜಾಣ ಜಾಣೆಯರು~ ತಂಡವು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಫೆ. 20 ರಂದು ಶೇಷಾದ್ರಿಪುರದ ಸಿರೂರು ಪಾರ್ಕ್‌ನಲ್ಲಿ ಅಹೋರಾತ್ರಿ `ನಗೆ ಜಾಗರಣೆ~ ಮನರಂಜನಾ ಕಾರ್ಯಕ್ರಮ ಆಯೋಜಿಸಿದೆ.ಅಂದು ಸಂಜೆ 7.30ರಿಂದ ಪ್ರಾರಂಭವಾಗಲಿರುವ ಈ ನಗೆ ಜಾಗರಣೆಯಲ್ಲಿ ಹಾಸ್ಯ ಭಾಷಣಕಾರರಾದ ಪ್ರಾಣೇಶ್ ಗಂಗಾವತಿ, ನರಸಿಂಹ ಜೋಷಿ, ಬಸವರಾಜ ಮಹಾಮನಿ, ರವಿ ಭಜಂತ್ರಿ ಬೆಳಗಾವಿ, ಮಹದೇವ ಸತ್ತಿಗೇರಿ, ಅಸದುಲ್ಲಾ ಬೇಗ್, ಕೋಗಳಿ ಕೊಟ್ರೇಶ್, ಡಾ.ಬೆಣ್ಣೆ ಬಸವರಾಜು, ಗುಂಡಣ್ಣ ಡಿಗ್ಗಿ ಮೊದಲಾದವರು ರಂಜಿಸಲಿದ್ದಾರೆ.ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಈ ಬಾರಿ ಉತ್ತರ ಕರ್ನಾಟಕದ ಜತೆಗೆ, ದಕ್ಷಿಣ ಕನ್ನಡ ಹಾಗೂ ಬಯಲುಸೀಮೆಯ ಹಾಸ್ಯ ಕಲಾವಿದರು ಸೇರಲಿರುವುದರಿಂದ ಇದು ಶಿವರಾತ್ರಿ ಮುಪ್ಪರಿ ಮೇಳವಾಗಲಿದೆ.ಖ್ಯಾತ ಜಾದೂಗಾರ ಪ್ರಹ್ಲಾದಾಚಾರ್ಯ ಶಾಡೋ ಪ್ಲೇ ಹಾಗೂ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಸಿಕೊಟ್ಟರೆ, `ಸಿಹಿ ಕಹಿ~ ಚಂದ್ರು `ಮಧ್ಯರಾತ್ರಿ ಪರಪ್ಪನ (ಅಗ್ರ...ರ)~ ಕುರಿತು ಹರಿಕಥೆಯನ್ನು ತಮ್ಮದೇ ಆದ ಶೈಲಿಯಲ್ಲಿ ನಡೆಸಿಕೊಟ್ಟು ನಗಿಸಿ ನಲಿಸಲಿದ್ದಾರೆ. `ದಯಾನಂದ ಲೋಕ~ದಲ್ಲಿ ಮಿಮಿಕ್ರಿ ದಯಾನಂದ ಮತ್ತು ತಂಡದಿಂದ ನಗೆಯ ಕಾರ್ಯಕ್ರಮ ವಿದೆ. ಹೆಚ್ಚಿನ ಮಾಹಿತಿಗೆ ಪಿ. ಸದಾಶಿವ್: 98440 23561 ಅಥವಾ ಲಕ್ಷ್ಮೀನಾರಾಯಣ್: 96206 92325 ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry