ನಾಳೆ ನೀರಾವರಿ ಹೋರಾಟ ಸಭೆ; ಎನ್‌ವೈಜಿ

7

ನಾಳೆ ನೀರಾವರಿ ಹೋರಾಟ ಸಭೆ; ಎನ್‌ವೈಜಿ

Published:
Updated:

ಮೊಳಕಾಲ್ಮುರು: ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರು ಹಾಗೂ ಕೆರೆಗಳಿಗೆ ನೀರುಣಿಸುವ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಲು ಜ.5ರಂದು ತಾಲ್ಲೂಕಿನ ಹಾನಗಲ್‌ ಪ್ರವಾಸಿಮಂದಿರ ಆವರಣದಲ್ಲಿ 11.30ಕ್ಕೆ ಕಾಂಗ್ರೆಸ್‌ನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಹೇಳಿದರು.ತಾಲ್ಲೂಕಿನ ರಾಂಪುರದಲ್ಲಿ ಶುಕ್ರವಾರ ಸಂಜೆ ಈ ಬಗ್ಗೆ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು. ತುಂಗಭದ್ರಾ ಹಿನ್ನೀರು ಹಾಗೂ ಭದ್ರಾಮೇಲ್ದಂಡೆ ಯೋಜನೆ ಅಡಿ ನೀರು ತರುವ ಬಗ್ಗೆ ಚರ್ಚೆ ನಡೆಸಲಾಗುವುದು.ಈಗಾಗಲೇ ಸರ್ಕಾರಕ್ಕೆ 2 ಟಿಎಂಸಿ ನೀರಿಗಾಗಿ ಮನವಿ ಮಾಡಲಾಗಿದೆ. ಇದನ್ನು ಯಾವ ರೀತಿ ಸಮರ್ಪಕವಾಗಿ ಪಡೆದುಕೊಳ್ಳಬೇಕು ಎಂಬುದನ್ನು ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಸಭೆಗೆ ಕ್ಷೇತ್ರ ವ್ಯಾಪ್ತಿಯ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಸಲಹೆ ನೀಡಬೇಕು ಎಂದು ಅವರು ಹೇಳಿದರು.ಬ್ಲಾಕ್‌ ಅಧ್ಯಕ್ಷ ಪಟೇಲ್ ಪಾಪನಾಯಕ, ಉಪಾಧ್ಯಕ್ಷ ಮಂಜುನಾಥ್‌, ಮುಖಂಡರಾದ ಟಿ. ತಿಮ್ಮಪ್ಪ, ಜಿ. ಪ್ರಕಾಶ್‌, ವಿಜಯ್‌, ಗೋವಿಂದಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry