ನಾಳೆ ನೆಟ್ಟಕಲ್ಲಪ್ಪ ರಸ್ತೆ ಓಟ ಸ್ಪರ್ಧೆ

ಗುರುವಾರ , ಜೂಲೈ 18, 2019
28 °C

ನಾಳೆ ನೆಟ್ಟಕಲ್ಲಪ್ಪ ರಸ್ತೆ ಓಟ ಸ್ಪರ್ಧೆ

Published:
Updated:

ಬೆಂಗಳೂರು: ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ `ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಪ್ರಾಯೋಜಿತದಲ್ಲಿ ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯ ಮಟ್ಟದ ರಸ್ತೆ ಓಟದ ಸ್ಪರ್ಧೆಗಳು ಭಾನುವಾರ ಹಾಸನದಲ್ಲಿ ಜರುಗಲಿವೆ.ಹಾಸನದ ಜಿಲ್ಲಾ ಕ್ರೀಡಾಂಗಣದಿಂದ ಬೆಳಿಗ್ಗೆ  6.30ಕ್ಕೆ ಓಟದ ಸ್ಪರ್ಧೆ ಆರಂಭವಾಗಲಿದೆ. ಈ ಸ್ಪರ್ಧೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ. ಯಲ್ಲಪ್ಪ ಅವರು ಚಾಲನೆ ನೀಡಲಿದ್ದಾರೆ.ಸ್ಪರ್ಧೆಯ ವಿವರ: ಪುರುಷರಿಗೆ 12 ಕಿ.ಮೀ.; ಮಹಿಳೆಯರಿಗೆ 6ಕಿ.ಮೀ.  ಬಾಲಕ ಹಾಗೂ ಬಾಲಕಿಯರಿಗೆ (16 ವರ್ಷ ವಯಸ್ಸಿನೊಳಗಿನವರು) 2.5 ಕಿ.ಮೀ. ಸ್ಪರ್ಧೆಗಳು ನಡೆಯಲಿವೆ. ಹಾಸ ನದ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 4ರಂದು ಸಂಜೆ 3ಗಂಟೆಯ ಒಳಗಾಗಿ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿ ಸಂಖ್ಯೆಯನ್ನು ಪಡೆದು ಕೊಳ್ಳಬೇಕು.ಈ ಸ್ಪರ್ಧೆಯು ಒಟ್ಟು 36.600. ಬಹುಮಾನದ ಮೊತ್ತವನ್ನು ಒಳ ಗೊಂಡಿದೆ.ರಸ್ತೆಯ ಓಟದ ಮಾರ್ಗ: ಹಾಸನ ಜಿಲ್ಲಾ ಕ್ರೀಡಾಂಗಣದಿಂದ ಎಂ.ಜಿ ರೋಡ್, ರಿಂಗ್ ರೋಡ್, ಸಾಲಗಾಮೆ ರಸ್ತೆ, ತವರದೇವರ ಕೊಪ್ಪಳ,  ಡಯಟ್ ಮತ್ತು ಇದೇ ಮಾರ್ಗದಲ್ಲಿ ವಾಪಸ್ ಬಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳುವುದು.ಅಂದು ಸಂಜೆ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮ ದಲ್ಲಿ  ಹಾಸನ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry