ನಾಳೆ ಪತ್ರಿಕಾ ಭವನಕ್ಕೆ ಶಂಕುಸ್ಥಾಪನೆ

7

ನಾಳೆ ಪತ್ರಿಕಾ ಭವನಕ್ಕೆ ಶಂಕುಸ್ಥಾಪನೆ

Published:
Updated:

ರಾಮನಗರ:  ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಪಕ್ಕದ ನಿವೇಶನದಲ್ಲಿ ಜಿಲ್ಲಾ ಕೇಂದ್ರದ ಪತ್ರಿಕಾ ಭವನ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಸೋಮವಾರ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ಅಂದು ಬೆಳಿಗ್ಗೆ 11 ಗಂಟೆಗೆ ಶಂಕುಸ್ಥಾಪನೆ ನೆರವೇರಿಸುವರು. ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಭವನದ ನೀಲಿ ನಕ್ಷೆ ಅನಾವರಣಗೊಳಿಸುವರು. ಶಾಸಕ ಕೆ.ರಾಜು ಅಧ್ಯಕ್ಷತೆವಹಿಸುವರು.ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ, ಜಿ.ಪಂ ಅಧ್ಯಕ್ಷೆ ಯು.ಪಿ.ನಾಗೇಶ್ವರಿ, ಶಾಸಕರಾದ ಡಿ.ಕೆ.ಶಿವಕುಮಾರ್, ಬಾಲಕೃಷ್ಣ, ಎಂ.ವಿ.ನಾಗರಾಜು, ಎಂ.ವಿ.ರಾಜಶೇಖರನ್, ಪುಟ್ಟಣ್ಣ, ಇ. ಕೃಷ್ಣಪ್ಪ, ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಜಿಲ್ಲಾ ಪತ್ರಕರ್ತರ ಸಂಘದ ಎಂ.ಎಚ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪತಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋವಿಂದರಾಜು, ವಾರ್ತಾ ಇಲಾಖೆ ನಿರ್ದೇಶಕ ಕೆ.ಎಸ್.ಬೇವಿನಮರದ ಪಾಲ್ಗೊಳ್ಳುವರು.ಪದಾಧಿಕಾರಿಗಳ ಆಯ್ಕೆ

ದೇವನಹಳ್ಳಿ:  ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮುನಿವೆಂಕಟರಮಣ, ಮುದ್ದಣ್ಣ(ಉಪಾಧ್ಯಕ್ಷ),  ವಿನಯ್ (ಪ್ರಧಾನ ಕಾರ್ಯದರ್ಶಿ),  ಡಿ.ಎನ್.ನಾರಾಯಣಸ್ವಾಮಿ (ಕಾರ್ಯದರ್ಶಿ), ಎಂ.ಶಿವಪ್ಪ (ಖಜಾಂಚಿ) ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry