ಸೋಮವಾರ, ಆಗಸ್ಟ್ 26, 2019
20 °C

ನಾಳೆ ಬಸ್ ದಿನಾಚರಣೆ

Published:
Updated:

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಬಸ್ ದಿನಾಚರಣೆ ಸೋಮವಾರ ನಡೆಯಲಿದೆ.ಈ ಸಲ ಹಳೆ ವಿಮಾನ ನಿಲ್ದಾಣ ರಸ್ತೆ (ಐಟಿಪಿಎಲ್), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ, ಹಳೆ ಮದ್ರಾಸ್ ರಸ್ತೆಗಳನ್ನು ಬಸ್ ದಿನಾಚರಣೆಗೆ ಆಯ್ದುಕೊಳ್ಳಲಾಗಿದೆ.ಸಂಸ್ಥೆಯು ಪ್ರತಿದಿನ 6389 ಬಸ್‌ಗಳೊಂದಿಗೆ 82,771 ಟ್ರಿಪ್‌ಗಳ ಆಚರಣೆ ಮಾಡುತ್ತಿದೆ. ಬಸ್ ದಿನದಂದು ಪ್ರಸ್ತುತ ಆಚರಣೆಯಲ್ಲಿರುವ 1500ಕ್ಕೂ ಅಧಿಕ ಸಾಮಾನ್ಯ ಪಾಳಿಯ ಬಸ್‌ಗಳನ್ನು ರಾತ್ರಿ 7ರ ನಂತರ 10 ಗಂಟೆ ವರೆಗೂ ವಿಸ್ತರಿಸಿ ಆಚರಣೆ ಮಾಡಲಾಗುವುದು. ಅಲ್ಲದೇ ಘಟಕಗಳಲ್ಲಿ ಲಭ್ಯ ಇರುವ 100 ಹೆಚ್ಚುವರಿ ವಾಹನಗಳನ್ನು ಮಾರ್ಗದ ಮೇಲೆ ಹೆಚ್ಚಿನ ಕಾರ್ಯಾಚರಣೆ ಮಾಡಲು ನಿಯೋಜಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Post Comments (+)