ನಾಳೆ ಬೆಳಗಾವಿಗೆ ರಾಷ್ಟ್ರಪತಿ

7

ನಾಳೆ ಬೆಳಗಾವಿಗೆ ರಾಷ್ಟ್ರಪತಿ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಬೆಳಗಾವಿಯ ಸುವರ್ಣ ಸೌಧ ಉದ್ಘಾಟನೆಗೆ ಗುರುವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.ಬೆಳಗಾವಿಯಲ್ಲಿ ನಿರ್ಮಿಸಿರುವ ಸುವರ್ಣ ಸೌಧವನ್ನು ಉದ್ಘಾಟಿಸುವ ರಾಷ್ಟ್ರಪತಿ, ಸುವರ್ಣಸೌಧದಲ್ಲಿ ನಡೆಯುವ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡುವರು ಮತ್ತು ಸ್ವಾಮಿ ವಿವೇಕಾನಂದ ಮೌಲ್ಯಾಧಾರಿತ ಹಾಗೂ ಸಾಂಸ್ಕೃತಿಕ ಕೇಂದ್ರದ ಭೂಮಿ ಪೂಜೆ ಸಮಾರಂಭದಲ್ಲೂ ರಾಷ್ಟ್ರಪತಿ ಭಾಗವಹಿಸುವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry