ಬುಧವಾರ, ನವೆಂಬರ್ 13, 2019
23 °C

ನಾಳೆ ಮಕ್ಕಳಿಂದ ನಾಟಕ ಪ್ರದರ್ಶನ

Published:
Updated:

ಸಾಗರ: ಇಲ್ಲಿನ `ಸ್ಪಂದನ' ರಂಗ ತಂಡ ಹಮ್ಮಿಕೊಂಡಿರುವ ಮಕ್ಕಳ ರಂಗ ತರಬೇತಿ ಶಿಬಿರ `ಚೈತ್ರ ಮೇಳ-2013'ರ ಸಮಾರೋಪ ಸಮಾರಂಭ ಏ. 27ರಂದು ಸಂಜೆ 5ಕ್ಕೆ ಕಾಗೋಡು ರಂಗಮಂದಿರದಲ್ಲಿ ನಡೆಯಲಿದೆ.ಈ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು `ಕಾಗೆ ಕಣ್ಣು ಇರುವೆ ಬಲ' ಎಂಬ ನಾಟಕ (ರಚನೆ: ಕೋಟಗಾನಹಳ್ಳಿ ರಾಮಯ್ಯ. ನಿರ್ದೇಶನ: ಎಂ.ವಿ. ಪ್ರತಿಭಾ) ಪ್ರದರ್ಶಿಸಲಿದ್ದಾರೆ.ಸಮಾರಂಭದಲ್ಲಿ ಸಾಹಿತಿ ಡಾ.ನಾ. ಡಿಸೋಜ ರಂಗ ಕಲಾವಿದ ಸೀತಾರಾಮ ಹಾರೆಕೊಪ್ಪ, ಲೇಖಕ ಶ್ರೀನಿವಾಸ ಕರಿಯಪ್ಪ, ರಂಗ ಕಲಾವಿದ ನಾಗೇಂದ್ರ ಕುಮಟಾ, ವಿಜಯಶ್ರೀ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)