ಬುಧವಾರ, ಮೇ 12, 2021
26 °C

ನಾಳೆ ಸುವರ್ಣಲಕ್ಷ್ಮಿ ದಾಂಪತ್ಯ ವ್ರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಾಮದೂತ ಸ್ವಾಮಿ ಆಶ್ರಮ: ಭಾನುವಾರ  ಶ್ರೀರಾಮದೂತ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೇಣುದತ್ತ ಸುವರ್ಣಲಕ್ಷ್ಮಿ  ದಾಂಪತ್ಯ ವ್ರತ, ಕಂಕಣಧಾರಣ ವ್ರತ. ನಂತರ ಸ್ವಾಮೀಜಿಗಳಿಂದ ಧರ್ಮ ಕುರಿತು ಉಪನ್ಯಾಸ ಮತ್ತು ಆಶೀರ್ವಚನ.ಆಂಧ್ರದ ರಾಮದೂತ ಸ್ವಾಮಿ ಆಶ್ರಮದ ಶ್ರೀರಾಮದೂತ ಸ್ವಾಮೀಜಿ ಅವರು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೇಶದಲ್ಲಿ ಶಾಂತಿ, ಸಮೃದ್ಧಿಗಾಗಿ ಈ ವ್ರತಗಳನ್ನು ಹಮ್ಮಿಕೊಂಡಿದ್ದಾರೆ.ಸ್ವಾಮೀಜಿಯವರು 7ನೇ ವಯಸ್ಸಿನಲ್ಲೇ ಶ್ರೀಶೈಲದಲ್ಲಿ ಶ್ರೀಪುರಂದೇಶ್ವರ ಸ್ವಾಮೀಜಿಯವರೊಂದಿಗೆ ಸೇರಿ ಧ್ಯಾನ, ಯೋಗ ಹಾಗೂ ತಪಸ್ಸನ್ನು ಮಾಡಿದ ಸಾಧಕ.14ನೇ ವಯಸ್ಸಿನಲ್ಲಿ ಗೋವಾದ ಅರಣ್ಯದಲ್ಲಿ ಧ್ಯಾನ ನಡೆಸಿ ಮುಂದೆ ಹಿಮಾಲಯದಲ್ಲಿ ಅನೇಕ ವರ್ಷ ತಪೋಧ್ಯಾನ ಮಾಡಿದ್ದಾರೆ. ಆಂಧ್ರದ ಪ್ರಕಾಶಂ ಜಿಲ್ಲೆಯ ಚೆವೂರಿನಲ್ಲಿ ಆಶ್ರಮ ಸ್ಥಾಪಿಸಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎನ್ನುತ್ತಾರೆ ಕಾರ್ಯಕ್ರಮ ಸಂಘಟನೆಯ ರಾಜೇಂದ್ರ ನಾಯ್ಡು.ಕಾರ್ಯಕ್ರಮಕ್ಕೆ ಆಗಮಿಸುವ ದಂಪತಿಗಳಿಗೆ ವ್ರತಕ್ಕೆ ಬೇಕಾಗುವ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಸ್ಥಳ: ಕೃಷ್ಣ ವಿಹಾರ, ಅರಮನೆ ಮೈದಾನ, ಮೇಕ್ರಿ ಸರ್ಕಲ್ ಸಮೀಪ. ಬೆಳಿಗ್ಗೆ 9.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.