ನಾವು ನೋಡಿದ ಚಿತ್ರ: ನಮ್ಮಣ್ಣ ಡಾನ್

7

ನಾವು ನೋಡಿದ ಚಿತ್ರ: ನಮ್ಮಣ್ಣ ಡಾನ್

Published:
Updated:

ರವಿಜೋಶಿ ನಿರ್ಮಿಸಿರುವ `ನಮ್ಮಣ್ಣ ಡಾನ್~ ಚಿತ್ರತಂಡ ಪ್ರಚಾರಕ್ಕಾಗಿ ಮೊದಲ ಹಂತದಲ್ಲಿ ಗುಲ್ಬರ್ಗ, ವಿಜಾಪುರ, ಬಾದಾಮಿ ಮುಂತಾದ ಕಡೆ ಹೋಗಿ ಬಂದಿತ್ತು. ನಂತರ ಹಾಸನ, ಮಂಗಳೂರು, ಚೆನ್ನರಾಯಪಟ್ಟಣಗಳಿಗೆ ತೆರಳಿತ್ತು. ಕೊನೆಯದಾಗಿ ಧಾರವಾಡ, ಶಿವಮೊಗ್ಗ, ದಾವಣಗೆರೆ ಮುಂತಾದೆಡೆ ಪ್ರಯಾಣ ಬೆಳೆಸಿತ್ತು.ಹೀಗೆ ರಾಜ್ಯದಾದ್ಯಂತ ಪ್ರಚಾರ ಕಾರ್ಯ ನಡೆಸಿದ್ದ `ನಮ್ಮಣ್ಣ ಡಾನ್~ ಹಾಸ್ಯ ಪ್ರಧಾನ ಚಿತ್ರ. ರಮೇಶ್‌ಅರವಿಂದ್ ನಿರ್ದೇಶನದ ಈ ಚಿತ್ರದಲ್ಲಿ ರಮೇಶ್, ಮೋನಾ ಪರ್ವೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್. ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು  ನಟಿಸಿದ್ದಾರೆ.

 

ಮ್ಯಾಥ್ಯೂಸ್ ಮನು ಸಂಗೀತ, ಕೃಷ್ಣಕುಮಾರ್  ಛಾಯಾಗ್ರಹಣ, ಸೌಂದರ್‌ರಾಜ್ ಸಂಕಲನ, ರಮೇಶ್ ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದು, ರಮೇಶ್ ದೇಸಾಯಿ ಕಲಾ ನಿರ್ದೇಶನ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry