ನಾವು ನೋಡುವ ಸಿನಿಮಾ!

7

ನಾವು ನೋಡುವ ಸಿನಿಮಾ!

Published:
Updated:

ಕಾಡುವ `ಅಮೌರ್', ಕಾಡುವ ಆ ಹುಡುಗ


ನೆದರ್‌ಲೆಂಡ್‌ನ ನಿರ್ದೇಶಕ ಬೌಡೆವಿನ್ ಕೂಲೆ ನಿರ್ದೇಶನದ `ಕೌಬಾಯ್' ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದು. ತಾಯಿ ಕಳೆದುಕೊಂಡ ಹುಡುಗ ಮತ್ತು ತಂದೆಯ ನಡುವಿನ ಬಾಂಧವ್ಯದ ಕುರಿತು ಚಿತ್ರ ಹೇಳುತ್ತದೆ. ಆ ಹುಡುಗನ ತುಂಟಾಟ, ಕಡೆಯಲ್ಲಿ ತಾಯಿಯ ಸಾವಿನ ಕುರಿತು ಅರಿತಾಗ ಆತ ಅದನ್ನು ಎದುರಿಸುವ ರೀತಿಯನ್ನು ಮನೋಜ್ಞವಾಗಿ ಹಿಡಿದಿಡಲಾಗಿದೆ. ಇದೊಂದು ರೀತಿಯಲ್ಲಿ ಮಕ್ಕಳ ಸಿನಿಮಾ ಕೂಡ.

 

`ಅಮೌರ್' ಇಬ್ಬರು ವಯಸ್ಸಾದ ದಂಪತಿಗಳ ನಡುವಿನ ಪ್ರೇಮ ಕತೆ. ಹೆಂಡತಿಗೆ ಆರೋಗ್ಯ ಕೆಟ್ಟಿದೆ. ಆಕೆಯ ಸಂಕಟವನ್ನು ಗಂಡನ ಕೈಯಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ತುಂಬಾ ಸೂಕ್ಷ್ಮ ರೀತಿಯಲ್ಲಿ ಎರಡು ಜೀವಗಳ ತುಮುಲಗಳನ್ನು ನಿರ್ದೇಶಕ ಮೈಕೆಲ್ ಹನೇಕೆ ಚಿತ್ರಿಸುತ್ತ ಹೋಗುತ್ತಾರೆ. ಫಿನ್‌ಲೆಂಡ್‌ನ ಅಕಿ ಕೌರಿಸ್ಮಕಿ ನಿರ್ದೇಶಿಸಿರುವ `ಲೆ ಹೌರೆ' ಚಿತ್ರವನ್ನು ನೋಡಬೇಕೆಂದಿದ್ದೇನೆ. ಹಾಗೆಯೇ ಪಂಜಾಬಿ ಚಿತ್ರ `ಆನೇ ಘೋರೆ ದ ದಾನ್', ಸುಮಿತ್ರಾ ಭಾವೆ ಹಾಗೂ ಸುನೀಲ್ ಸುಕ್ತಾಂಕರ್ ನಿರ್ದೇಶಿಸಿರುವ `ಸಂಹಿತಾ' ಕೂಡ ನೋಡಲೇಬೇಕಾದ ಚಿತ್ರಗಳು.

ಗಿರೀಶ್ ಕಾಸರವಳ್ಳಿ  ಅಂತರರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕಸಾಧ್ಯವಾದ್ರೆ ಎಲ್ಲವನ್ನೂ ನೋಡ್ತೀನಿ!


ಈ ಬಾರಿ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಅಲ್ಲಿ ಪ್ರದರ್ಶನಗೊಂಡ ಅನೇಕ ಚಿತ್ರಗಳು ಬೆಂಗಳೂರು ಉತ್ಸವದಲ್ಲಿಯೂ ಇವೆಯಂತೆ. ಹೀಗಾಗಿ ಉತ್ಸವದ ಎಲ್ಲಾ ಚಿತ್ರಗಳನ್ನು ನೋಡಬೇಕು ಎನ್ನುವ ಆಸೆ ಇದೆ. ಅಷ್ಟೇ ಅಲ್ಲ ಮಗಳು, ಗಂಡನ ಜತೆ ಸೇರಿಕೊಂಡು ಫ್ಯಾಮಿಲಿ ಪ್ಯಾಕೇಜ್ ರೀತಿ ಸಾಧ್ಯವಾದಷ್ಟು ಸಿನಿಮಾಗಳನ್ನು ನೋಡುತ್ತೇನೆ.


ಜಯಮಾಲಾನಟಿ, ನಿರ್ಮಾಪಕಿ

 


ನಿರ್ದೇಶಕರು ಮುಖ್ಯ


ನಿರ್ದೇಶಕರನ್ನು ಆಧರಿಸಿ ಸಾಮಾನ್ಯವಾಗಿ ಚಿತ್ರವನ್ನು ಆಯ್ದುಕೊಳ್ಳುತ್ತೇನೆ. ನಾನು ತುಂಬಾ ಇಷ್ಟ ಪಡುವ ನಿರ್ದೇಶಕರಲ್ಲಿ ಅಬ್ಬಾಸ್ ಕಿಯರೋಸ್ತಮಿ, ಕಿಮ್ ಕಿ ಡಕ್ ಹಾಗೂ ನಿಕೋಲಸ್ ಡಬ್ಲ್ಯೂ ರೆಫ್ನ್ ಪ್ರಮುಖರು. ಇವರ `ಲೈಕ್ ಸಮ್ ಒನ್ ಇನ್ ಲವ್', `ವಲ್ಹಲ್ಲಾ ರೈಸಿಂಗ್' ಹಾಗೂ ಈ ವರ್ಷದ ಕಾನ್ ಚಲನಚಿತ್ರೋತ್ಸದಲ್ಲಿ ಪ್ರಶಸ್ತಿ ಪಡೆದ `ಪಿಯೆಟಾ' ಚಿತ್ರಗಳನ್ನು ನೋಡಲೇಬೇಕು.


ಪಿ. ಶೇಷಾದ್ರಿ

 


ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕುರಸವಾ ಮತ್ತು ಕಾಸರವಳ್ಳಿ

ನನಗೆ ಜಪಾನಿ ನಿರ್ದೇಶಕ ಅಕಿರ ಕುರಸವಾ ಅಂದರೆ ಪಂಚಪ್ರಾಣ. ಈ ಬಾರಿ ಅವರ ಎರಡು ಮೂರು ಚಿತ್ರಗಳು ಪ್ರದರ್ಶನವಾಗುತ್ತಿವೆ. ಆ ಮಹಾನ್ ನಿರ್ದೇಶಕ ಕ್ಯಾಮೆರಾ ಬಳಸುತ್ತಿದ್ದ ರೀತಿ, ಕತೆಯನ್ನು ಆರಿಸಿಕೊಳ್ಳುತ್ತಿದ್ದ ರೀತಿ ನನಗೆ ಇಷ್ಟ. ಕಪ್ಪು ಬಿಳುಪು ಯುಗದ ಮಾಂತ್ರಿಕ ಎಂದೇ ಅವರನ್ನು ಕರೆಯಬಹುದು. ಹಾಗೆಯೇ ಗಿರೀಶ್ ಕಾಸರವಳ್ಳಿ ನನ್ನ ನೆಚ್ಚಿನ ನಿರ್ದೇಶಕ. ಅವರ ಒಂದೆರಡು ಸಿನಿಮಾಗಳನ್ನು ನೋಡಲು ಆಗಿರಲಿಲ್ಲ. ಅವು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿವೆ. ಒಬ್ಬರು ವಿದೇಶಿ ನೆಲದವರು, ಮತ್ತೊಬ್ಬರು ನಮ್ಮದೇ ಮಣ್ಣಿನಿಂದ ಮೂಡಿಬಂದವರು ಎಂಬ ಹೆಮ್ಮೆ ಇವರ ಬಗ್ಗೆ ಇದೆ. ಕಲಿಕೆಯ ದೃಷ್ಟಿಯಿಂದ ಇಬ್ಬರೂ ದೊಡ್ಡ ಗ್ರಂಥಗಳಂತೆಯೇ ಸರಿ. 


ರಮೇಶ್ ಅರವಿಂದ್, ನಟ

 


ಮರಾಠಿ, ಬಂಗಾಳಿ, ಮಲಯಾಳಿ...


ಇತ್ತೀಚಿನ ಕೆಲವು ವರ್ಷಗಳಲ್ಲಿ ಮರಾಠಿ ಚಿತ್ರರಂಗ ಹೊಸ ಹೆಜ್ಜೆ ಇರಿಸುತ್ತಿದೆ. ಮಾರುಕಟ್ಟೆಯೇ ಇಲ್ಲದ ಆ ಚಿತ್ರರಂಗ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಸತ್ಯಜಿತ್ ರೇ ನಂತರ ಬಂಗಾಳಿ ಚಿತ್ರಗಳು ಇತ್ತೀಚೆಗೆ ಮತ್ತೆ ಬೆಳಗುತ್ತಿವೆ. ಮಲಯಾಳಂ ಚಿತ್ರರಂಗ ಕೂಡ ಹೆಚ್ಚು ಬಂಡವಾಳ ಹೂಡದೆ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸುತ್ತಿದೆ. ಈ ಭಾಷೆಗಳನ್ನು ಪ್ರತಿನಿಧಿಸುವ ಚಿತ್ರಗಳು ಉತ್ಸವದಲ್ಲಿರುವುದು ಸಂತಸದ ವಿಚಾರ. ಇಟಲಿ ಮತ್ತು ಫ್ರೆಂಚ್ ಚಿತ್ರಗಳನ್ನು ಕೂಡ ಮಿಸ್ ಮಾಡಿಕೊಳ್ಳುವಂತಿಲ್ಲ. 

ಭಾವನಾ ನಟಿ

 

ಹಳೆಯ ಚಿತ್ರಗಳು ನಂಗಿಷ್ಟ

ಚಿತ್ರೋತ್ಸವದಲ್ಲಿ ತೀರಾ ಅಪರೂಪದ ಹಾಗೂ ಹಳೆಯ ಚಿತ್ರಗಳನ್ನು ನೋಡಬೇಕು ಎಂಬುದು ನನ್ನಾಸೆ. ಚಿತ್ರೋತ್ಸವದಲ್ಲಿ `ಗರಂ ಹವಾ' ಇದೆಯೆಂದು ತಿಳಿದಾಕ್ಷಣ ಅದನ್ನು ಮತ್ತೊಮ್ಮೆ ನೋಡಬೇಕು ಅನ್ನಿಸಿತು. ಬೇರೆಲ್ಲಾ ಚಿತ್ರಗಳಿಗಿಂತಲೂ ಅದು ನನ್ನನ್ನು ಹೆಚ್ಚು ಸೆಳೆದ ಚಿತ್ರ. ಅತ್ಯಾಧುನಿಕ ಪರಿಕರಗಳು ಲಭ್ಯವಿಲ್ಲದ ಕಾಲದಲ್ಲಿಯೇ ಖ್ಯಾತ ನಿರ್ದೇಶಕ ಎಂ.ಎಸ್. ಸತ್ಯು ಹೊಸ ಪ್ರಯೋಗವೊಂದನ್ನು ಮಾಡಿದರು. ದೇಶದಾದ್ಯಂತ ಆ ಚಿತ್ರ ಹೊಸ ಅಲೆ ಸೃಷ್ಟಿಸಿತ್ತು. 

ಸುಮನಾ ಕಿತ್ತೂರುನಿರ್ದೇಶಕಿ

 

ಜರ್ಮನ್ ಮತ್ತು ಫ್ರೆಂಚ್ ಸೊಬಗು


ಫತೇ ಹಕಿನ್ ಜರ್ಮನ್ ಭಾಷೆಯಲ್ಲಿ ನಿರ್ದೇಶಿಸಿದ `ದಿ ಎಡ್ಜ್ ಆಫ್ ದಿ ಹೆವನ್', ಕಳೆದ ಹತ್ತು ವರ್ಷಗಳಲ್ಲಿ ನಾನು ನೋಡಿದ ಸಿನಿಮಾಗಳಲ್ಲೇ ಶ್ರೇಷ್ಠವಾದುದು. ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಹೆಗ್ಗಳಿಕೆ ಇದರದು. ಅದಷ್ಟೇ ಇದರ ಮಾನದಂಡವಲ್ಲ. ಕತೆ ಹಾಗೂ ನಿರ್ಮಾಣದ ಸೊಬಗಿನಿಂದ ಚಿತ್ರ ಆಕರ್ಷಿಸುತ್ತದೆ. ಹಾಗೆಯೇ ಫ್ರೆಂಚ್ ನಟಿ ಜೂಲಿಯೆಟ್ ಬೆನೋಷೆ ನಟಿಸಿರುವ `ಬ್ಲೂ' ನನ್ನೊಳಗೆ ಬಹಳ ದಿನ ಹಸಿರಾಗಿ ಉಳಿದಿತ್ತು. ಚಿತ್ರೋತ್ಸವದಲ್ಲಿ ಆಕೆಯ ಯಾವ ಚಿತ್ರಗಳಿದ್ದರೂ ತಪ್ಪದೇ ನೋಡುತ್ತೇನೆ.


ಜಿ. ಎಸ್. ಭಾಸ್ಕರ್ ಹಿರಿಯ ಛಾಯಾಗ್ರಾಹಕ 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry