ನಾವು ಬಿಟ್ಟರೂ ಅದು ಬಿಡುವುದಿಲ್ಲ

7

ನಾವು ಬಿಟ್ಟರೂ ಅದು ಬಿಡುವುದಿಲ್ಲ

Published:
Updated:

ಹುಟ್ಟಿನಿಂದಲೇ ಬಂದಿರುವ ಜಾತಿ ನಮಗೆ ಅನಿವಾರ್ಯವಾಗಿದೆ.  ಏಕೆಂದರೆ ಜಾತಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಾವು ಅದನ್ನು ಬಿಡುತ್ತೇವೆಂದರೂ ಅದು ನಮ್ಮನ್ನು ಬಿಡುವುದಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸುವಾಗಲೇ ಅರ್ಜಿಯಲ್ಲಿರುವ ಜಾತಿ ಕಾಲಂನಲ್ಲಿ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಅದು ಮುಂದೆ ಪ್ರತಿಯೊಂದು ಸಂದರ್ಭದಲ್ಲೂ ಮುಂದುವರೆಯುತ್ತದೆ. ಜಾತಿಯನ್ನು ನಮೂದಿಸದಿದ್ದರೆ ಮುಂದೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ತೊಂದರೆಯಾಗುತ್ತದೆ. ಹೀಗಾಗಿ  ಅದನ್ನು ನಾವು ಬಿಡುವಂತಿಲ್ಲ.ನಮ್ಮ ಹುಟ್ಟಿನಿಂದಲೇ ಬಂದಿರುವ ಜಾತಿಯಲ್ಲಿ ನಾವು ಇರಬೇಕಾಗುತ್ತದೆ. ಅದನ್ನು ಬಿಡುವುದಾದರೂ ಹೇಗೆ? ವಿವಾಹದ ಸಂದರ್ಭದಲ್ಲಿ ಅನ್ಯಜಾತಿಯವರನ್ನು ವಿವಾಹವಾದರೆ ಅಲ್ಲೂ ಸಹ ಒಂದು ಜಾತಿಗೆ ಸೇರ್ಪಡೆಗೊಂಡು ಆ ಜಾತಿಗೆ ಸೀಮಿತವಾಗಬೇಕಾಗುತ್ತದೆ. ವಿಷಯ ಹೀಗಿರುವುದರಿಂದ ಜಾತಿಯನ್ನಂತೂ ಬಿಡಲು ಸಾಧ್ಯವಿಲ್ಲ.ಇನ್ನು ಜಾತಿಯಲ್ಲಿ ಮೇಲು ಕೀಳು ಎಂಬುದನ್ನು ಸಹ ನಾವೇ ವರ್ಗೀಕರಿಸಿ ಕೊಂಡಿದ್ದೇವೆಯೇ ಹೊರತು ಜಾತಿಯಲ್ಲಿ ಮೇಲು ಕೀಳೆಂಬುದಿಲ್ಲ. ಪ್ರತಿಯೊಬ್ಬರ ದೇಹದಲ್ಲಿ ಹರಿಯುವ ರಕ್ತ ಕೆಂಪು, ನಾವು ಕುಡಿಯುವ ನೀರು, ಸೇವಿಸುವ ಗಾಳಿ ಎಲ್ಲಾ ಒಂದೇ ಅಲ್ಲವೇ? ಎಲ್ಲರ ಮನೆಯ ಜ್ಯೋತಿ ಒಂದೇ ಅಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry