ನಾಸಾದತ್ತ

7

ನಾಸಾದತ್ತ

Published:
Updated:
ನಾಸಾದತ್ತ

ವಿಶಾಲ ಆಕಾಶದತ್ತ ಕಣ್ಣರಳಿಸಿ ನೋಡುವ ಮಕ್ಕಳಿಗೆ ಅದರಾಚೆಗಿರುವ ಪ್ರಪಂಚದ ಕುರಿತ ಆಸಕ್ತಿ ಇದ್ದೇ ಇರುತ್ತದೆ. ಜತೆಗೆ ಬಾಹ್ಯಾಕಾಶ ವಿಜ್ಞಾನಿಗಳಾದ ರಾಕೇಶ್ ಶರ್ಮ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಅವರ ಕುರಿತು ಪಠ್ಯಗಳಲ್ಲಿ ಓದಿ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿಕೊಂಡಿರುತ್ತಾರೆ. ಇವರ ಈ ಕುತೂಹಲಭರಿತ ಕನಸು ನನಸಾಗುವ ಕಥೆಯೊಂದು ಇಲ್ಲಿದೆ.ರಾಜಾಜಿನಗರ, ಬಸವೇಶ್ವರ ನಗರ, ಮಾಗಡಿ ರಸ್ತೆ ಶ್ರೀ ವಾಣಿ ವಿದ್ಯಾ ಸಂಸ್ಥೆಯ 32 ಮಕ್ಕಳು ನಾಸಾದಲ್ಲಿ ತರಬೇತಿ ಪಡೆಯಲು ಆಯ್ಕೆಯಾಗಿದ್ದಾರೆ. ಬಾಹ್ಯಾಕಾಶ ವಿಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಾಸಾ ಆಯೋಜಿಸುವ ‘ಸ್ಪೇಸ್ ಕ್ಯಾಂಪ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈ ಶಾಲೆಗೆ ವಿಶೇಷ ಆಹ್ವಾನ ಸಿಕ್ಕಿದೆ.  ಅಮೆರಿಕದ ಅಲಬಾಮಾದ ಹಂಟ್ಸ್‌ವ್ಯಾಲಿಯಲ್ಲಿರುವ ಅಮೆರಿಕ ಬಾಹ್ಯಾಕಾಶ ಹಾಗೂ ರಾಕೆಟ್ ಕೇಂದ್ರದಲ್ಲಿ ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ ತರಬೇತಿ ಪಡೆಯುವ ಸದಾವಕಾಶ ಈ ಮಕ್ಕಳಿಗೆ ಲಭಿಸಿರುವುದು ಅದೃಷ್ಟವೇ ಸರಿ.ಅಮೆರಿಕ ಕಾಂಗ್ರೆಸ್ ಹಾಗೂ ನಾಸಾದ ಸಹಯೋಗದಲ್ಲಿ 1965ರಲ್ಲಿ ಆರಂಭವಾದ ‘ಸ್ಪೇಸ್ ಕ್ಯಾಂಪ್’ ಇದುವರೆಗೂ ದೇಶ ವಿದೇಶಗಳ 5,55,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಸ್ಪೇಸ್ ಕ್ಯಾಂಪ್, ಸ್ಪೇಸ್ ಅಕಾಡೆಮಿ ಹಾಗೂ ಅಡ್ವಾನ್ಸ್ ಸ್ಪೇಸ್ ಅಕಾಡೆಮಿ ಎಂಬ ಮೂರು ತರಬೇತಿ ಕಾರ್ಯಕ್ರಮಗಳು ಇಲ್ಲಿವೆ. ಬಾಹ್ಯಾಕಾಶದಲ್ಲಿನ ಪ್ರತಿಯೊಂದು ಅನುಭವಗಳೂ ಸಿಗುವಂತೆ ಇಲ್ಲಿನ ತರಬೇತಿ ಕೇಂದ್ರ  ಸಜ್ಜುಗೊಳಿಸಲಾಗಿದೆ. 9 ರಿಂದ 18 ವಯೋಮಾನದ ಮಕ್ಕಳು ಮಾತ್ರ ಈ ಕ್ಯಾಂಪ್‌ಗೆ ಅರ್ಹರು.ಪ್ರತಿ 2-3 ತಿಂಗಳಿಗೊಮ್ಮೆ ನಾಸಾ ಆಯೋಜಿಸುವ ಸ್ಪೇಸ್ ಕ್ಯಾಂಪ್ ಕಾರ್ಯಕ್ರಮಕ್ಕೆ ಪ್ರಪಂಚದ ಇತರ ರಾಷ್ಟ್ರಗಳ ಮಕ್ಕಳಿಗೂ ಆಹ್ವಾನವಿರುತ್ತದೆ. ಇದೀಗ ಇಂಥದ್ದೊಂದು ಅವಕಾಶ ಶ್ರೀ ವಾಣಿ ವಿದ್ಯಾ ಕೇಂದ್ರದ ಮಕ್ಕಳ ಪಾಲಿಗೆ ಒದಗಿದೆ. ಈ ಸಂಸ್ಥೆಯ ಮೂರು ಶಾಲೆಗಳ ಒಟ್ಟು 32 ವಿದ್ಯಾರ್ಥಿಗಳು, ಇಬ್ಬರು ವಿಜ್ಞಾನ ವಿಷಯದ ಶಿಕ್ಷಕರು ಹಾಗೂ ಶಾಲೆಯ ಪ್ರಾಂಶುಪಾಲರಾದ ಶಾರದಾ ಪ್ರಸಾದ್ ಹಾಗೂ ಸ್ಪೇಸ್ ಕ್ಯಾಂಪ್ ರಾಯಭಾರಿ ಸುಧೀರ್ ಕಾಮತ್ ಅವರನ್ನೊಳಗೊಂಡ ತಂಡ ಏಪ್ರಿಲ್ 14 ರಂದು ಅಮೆರಿಕಾಕ್ಕೆ ಪ್ರಯಾಣ ಬೆಳೆಸಲಿದೆ.‘ಶ್ರೀ ವಿದ್ಯಾ ಕೇಂದ್ರದ ಮಕ್ಕಳಿಗೆ ‘ಅಡ್ವಾನ್ಸ್ ಕ್ಯಾಂಪ್’ ದೊರೆತಿರುವುದು ಸಾಕಷ್ಟು ಸಂತಸವಾಗಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕುರಿತ ಆಸಕ್ತಿ ಕಡಿಮೆ ಆಗುತ್ತಿದೆ. ಅವರಲ್ಲಿ ಇಂಥ ಆಸಕ್ತಿ ಮೂಡಿಸುವುದು ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಅವರನ್ನು ಸೆಳೆಯುವುದು ಈ ಕಾರ್ಯಕ್ರಮದ ಉದ್ದೇಶ. ಎಂಟು ದಿನಗಳ ಈ ಕಾರ್ಯಕ್ರಮವನ್ನು ನಾವು ಹತ್ತು ದಿನಗಳಿಗೆ ವಿಸ್ತರಿಸಿದೇವೆ. ಮೊದಲ ಎರಡು ದಿನ ವಾಷಿಂಗ್ಟನ್ ಡಿಸಿ ಸೇರಿದಂತೆ ಇತರ ಪ್ರೇಕ್ಷಣೀಯ ತಾಣಗಳ ವೀಕ್ಷಣೆ. ಥೀಮ್ ಪಾರ್ಕ್, 6 ಫ್ಲಾಗ್ ಭೇಟಿ. ನಂತರ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿಗೆ ಅವಕಾಶ ಪಡೆಯಲು ಸಕಲ ಪ್ರಯತ್ನ ಮಾಡಲಾಗುತ್ತಿದೆ.‘ಇನ್ನುಳಿದ ಎಂಟು ದಿನಗಳನ್ನು ಮಕ್ಕಳು ಸಂಪೂರ್ಣವಾಗಿ ಸ್ಪೇಸ್ ಕ್ಯಾಂಪ್‌ನಲ್ಲೇ ಕಳೆಯಲಿದ್ದಾರೆ. ಬೆಳಿಗ್ಗೆ 7ಕ್ಕೆ ಆರಂಭವಾಗುವ ಈ ಕಾರ್ಯಾಗಾರ ಮುಗಿಯುವುದು ರಾತ್ರಿ 10.30ಕ್ಕೆ. ಇದೇ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ ಸಂಪರ್ಕ ಹಾಗೂ ಸಂದರ್ಶನ ಎರಡೂ ಅವಕಾಶಗಳು ಮಕ್ಕಳಿಗೆ ಸಿಗಲಿವೆ’ ಎಂದು  ಹೆಮ್ಮೆಯಿಂದ ಹೇಳುತ್ತಾರೆ ಪ್ರಾಂಶುಪಾಲ ಶಾರದಾ ಪ್ರಸಾದ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry