ಶುಕ್ರವಾರ, ನವೆಂಬರ್ 22, 2019
26 °C

ನಾಸಾದಿಂದ ಸ್ಮಾರ್ಟ್‌ಫೋನ್ ಉಪಗ್ರಹ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ' ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಅಳವಡಿಸಿದ ಮೂರು ಪುಟ್ಟ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದೆ.


`ನಾಸಾ' ಇತಿಹಾಸದಲ್ಲಿಯೇ ಈ ಮೂರು ಅತ್ಯಂತ ಕಡಿಮೆ ವೆಚ್ಚದ ಉಪಗ್ರಹಗಳು ಎಂಬ ಹೆಗ್ಗಳಿಕೆ ಪಡೆದಿವೆ. ಪುಟ್ಟ ಘನಾಕೃತಿಯ ಉಪಗ್ರಹಗಳಲ್ಲಿ ಸ್ಮಾರ್ಟ್‌ಫೋನ್ ಅಳವಡಿಸಲಾಗಿದ್ದು ಭೂಮಿಯ ಚಿತ್ರಗಳನ್ನು ಸೆರೆ ಹಿಡಿಯಲಿವೆ. ಸ್ಮಾರ್ಟ್‌ಫೋನ್‌ಗಳು ಉಪಗ್ರಹಗಳ ಕಂಪ್ಯೂಟರ್‌ನಂತೆಯೂ ಕೆಲಸ ನಿರ್ವಹಿಸಲಿವೆ.ವರ್ಜಿನೀಯಾದ ವಾಲಪ್ಸ್ ದ್ವೀಪದಲ್ಲಿರುವ ನಾಸಾ ಉಡಾವಣಾ ಕೇಂದ್ರದಿಂದ ಈ ಫೋನ್‌ಸ್ಯಾಟ್ ಹೆಸರಿನ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.ಎರಡು ವಾರಗಳ ಕಾಲ ಬಾಹ್ಯಾಕಾಶದಲ್ಲಿರುವ ಈ ಫೋನ್‌ಸ್ಯಾಟ್ ರವಾನಿಸುವ ಸಂದೇಶಗಳನ್ನು ಕ್ಯಾಲಿಫೋರ್ನಿಯಾ ಹಾಗೂ ವಿವಿಧೆಡೆಯಲ್ಲಿರುವ ಕೇಂದ್ರಗಳು ದಾಖಲಿಸಿಕೊಳ್ಳಲಿವೆ.

ಪ್ರತಿಕ್ರಿಯಿಸಿ (+)