ನಾಸಿಕ್: ತೈಲ ಮಾಫಿಯಾದಿಂದ ಮತ್ತೆ ಹಲ್ಲೆ

7

ನಾಸಿಕ್: ತೈಲ ಮಾಫಿಯಾದಿಂದ ಮತ್ತೆ ಹಲ್ಲೆ

Published:
Updated:

ನಾಗ್ಪುರ್(ಐಎಎನ್ಎಸ್): ತೈಲ ಕಲಬೆರಕೆ ಪ್ರಕರಣಗಳ ತನಿಖೆ ನಡೆಸಲು ಹೋಗಿದ್ದ ನಾಸಿಕ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ಬೆಂಕಿ ಹಚ್ಚಿ ಸಾಯಿಸಿದ ಘಟನೆ ನಡೆದ ಒಂದು ವಾರಕ್ಕೆ ಸರಿಯಾಗಿ, ಇಂದು ಮಂಗಳವಾರ ತೈಲ ಮಾಫಿಯಾದವರು ಹತ್ತು ಜನ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಉಮ್ರೇದ್ ತಹಶೀಲ್ ನ ರಾಜುರ್ ವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಕಲಬೆರಕೆಗಾಗಿ ಅಕ್ರಮವಾಗಿ ಸೀಮೆ ಎಣ್ಣೆ ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿ ಅನುಸರಿಸಿ ತನಿಖೆ ನಡೆಸಲು ಅಲ್ಲಿಗೆ ತೆರಳಿದ್ದ ಹತ್ತು ಜನ ಪೊಲೀಸರ ತಂಡದ ಮೇಲೆ ತೈಲ ಮಾಫಿಯಾದವರ ಹಲ್ಲೆ ನಡೆಸಿದ್ದಾರೆ.

ಎರಡು ಜೀಪುಗಳಲ್ಲಿ ಪೊಲೀಸರ ತಂಡ ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಗ್ರಾಮದಲ್ಲಿನ ಜನರು ಜೀಪುಗಳ ಮೇಲೆ ಕಲ್ಲಿನ ಮಳೆಗರೆದರು. ಇದರಿಂದಾಗಿ ಜಿಲ್ಲಾ ಪೊಲೀಸ್ ಅಧಿಕಾರಿ ಸುಧಾಕರ್ ಪಾಲದುರ್ಕರ್ ಮತ್ತು ಇನ್ಸಪೆಕ್ಟರ್ ಮಧುಕರ ಗೇಟಿ ಎಂಬುವವರು ಸೇರಿದಂತೆ ಆರು ಜನ ಪೊಲೀಸರು ಗಾಯಗೊಂಡಿದ್ದಾರೆ. ಗಾಯಗೊಂಡ ಪೊಲೀಸರನ್ನು ಉಮ್ರೇದ್  ಆಸ್ಪತ್ರೆಗೆ ದಾಖಲಿಸಲಾಗಿದೆ.ಮಾಲೆಗಾಂವ್ ಸಮೀಪದ ಮನ್‌ಮಾಡ್‌ನ ಪಾನೇವಾಡಿಯಲ್ಲಿ ಪೆಟ್ರೋಲ್ ಕಲಬೆರಕೆ ಮಾಫಿಯಾ ಮೇಲೆ ದಾಳಿ ನಡೆಸಿದ ಮಾಲೆಗಾಂವ್‌ನ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಾನೆ ಅವರನ್ನು  ಕಳೆದ ಮಂಗಳವಾರ ಸಜೀವ ದಹನಗೊಳಿಸಿದ್ದ ಪ್ರಕರಣ ನಡೆದಿತ್ತು. ಈ ಸಂಬಂಧ  ಹತ್ತು ಜನ ಆರೋಪಿಗಳನ್ನು ಬಂಧಿಸಲಾಗಿತ್ತು.

 ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ ಸೋನಾವಣೆ ಸಜೀವ ದಹನ ಪ್ರಕರಣದ ಪ್ರಮುಖ ಆರೋಪಿ ಪೊಪಟ್ ಶಿಂಧೆ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಆತ ತೀವ್ರವಾದ ಸುಟ್ಟಗಾಯಗಳಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry