ಶನಿವಾರ, ನವೆಂಬರ್ 23, 2019
17 °C

ನಿಂಗಯ್ಯ ಪಕ್ಷ ಬಿಟ್ಟರೆ ಹಾನಿ ಇಲ್ಲ : ಚಂದ್ರಪ್ಪ

Published:
Updated:

ಕಳಸ: ಜೆಡಿಎಸ್ ಅಭ್ಯರ್ಥಿ ಆಗುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ತೊರೆಯುವ ಯೋಚನೆಯಲ್ಲಿ ಇರುವ ಬಿ.ಬಿ. ನಿಂಗಯ್ಯ ಅವರನ್ನು ಪಕ್ಷ ಗೌರವ ದಿಂದಲೇ ಕಳಿಸಿಕೊಡುತ್ತದೆ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಂಗಯ್ಯ ಕಾಂಗ್ರೆಸ್‌ಗೆ ಬಂದಾ ಗಿನಿಂದಲೂ ಪಕ್ಷ ಅವರನ್ನು ಗೌರವದಿಂದ ನಡೆಸಿಕೊಂಡಿತ್ತು. ಆದರೆ ಈಗ ಅವರು ಪಕ್ಷ ಬಿಡುವುದಾದರೆ ಅವರ ಜೊತೆಗೆ ಬೆರಳೆಣಿಕೆಯ ಜನರು ಹೋಗಬಹುದಷ್ಟೇ ಹೊರತು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರು ಹೋಗಲಾರರು ಎಂದು ಚಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಳಸವನ್ನು ತಾಲ್ಲೂಕು ಕೇಂದ್ರ ವಾಗಿಸುವ ಭರವಸೆಯನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಈಡೇರಿಸುವಲ್ಲಿ ವಿಫಲರಾಗಿದ್ದಾರೆ.ಕಳಸದ ಇನಾಂ ಸಮಸ್ಯೆ ಬಗೆಹರಿಸುವುದು  ಮತ್ತು ಕಳಸ ಕುಡಿಯುವ ನೀರಿನ ಯೋಜನೆಯ ಅನುಷ್ಟಾನದಲ್ಲೂ ರಾಜ್ಯ ಸರ್ಕಾರದ ವೈಫಲ್ಯ ಕಂಡು ಬಂದಿದೆ ಎಂದು ಚಂದ್ರಪ್ಪ ಟೀಕಿಸಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇನಾಂ ಸಮಸ್ಯೆ ಪರಿಹರಿಸುವುದು, ಕಳಸ ತಾಲ್ಲೂಕು ರಚನೆ ಮಾಡುವುದು ಮತ್ತು ಕಳಸ ಕುಡಿಯುವ ನೀರಿನ ಬವಣೆ ನೀಗುವುದು ಮೊದಲ ಆದ್ಯತೆ ಆಗುತ್ತದೆ ಎಂದೂ ಚಂದ್ರಪ್ಪ ಭರವಸೆ ನೀಡಿದರು.ನಿಂಗಯ್ಯ ಪಕ್ಷಾಂತರದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಗೊಂದಲ ಇರುವುದು ನಿಜವೇ ಎಂಬ ಪ್ರಶ್ನೆಗೆ, `ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಕಾಂಗ್ರೆಸ್ ಒಮ್ಮತದಿಂದ ಆರಿಸಿದ ಅಭ್ಯರ್ಥಿ. ಜನರ ನಿರೀಕ್ಷೆಗೆ ಅನುಗುಣ ವಾಗಿ ಕೆಲಸ ಮಾಡುತ್ತೇನೆ. ಸದಾ ಕಾರ್ಯಕರ್ತರ ಆಶೋತ್ತರಕ್ಕೆ ಸ್ಪಂದಿ ಸುತ್ತೇನೆ' ಎಂದೂ ಚಂದ್ರಪ್ಪ ಹೇಳಿದರು.ಪಕ್ಷದ ಮುಖಂಡರಾದ ಪ್ರಭಾಕರ್, ದೇವದಾಸ್, ಶ್ರೆನಿವಾಸ್ ಹೆಬ್ಬಾರ್, ಹರ್ಷ, ಮಹಾಬಲೇಶ್ವರ ಶಾಸ್ತ್ರಿ, ವಾಸುದೇವ, ಶುಕೂರ್ ಇದ್ದರು.ಬಿ.ಬಿ. ನಿಂಗಯ್ಯ ರಾಜೀನಾಮೆ

ಮೂಡಿಗೆರೆ:
ಮಾಜಿ ಸಚಿವ ಬಿ.ಬಿ. ನಿಂಗಯ್ಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅವರ ವೈಯಕ್ತಿಕ ಕಾರಣಗಳಿಂದ ಸ್ವ ಇಚ್ಛಿತವಾಗಿ ರಾಜಿನಾಮೆ ನೀಡುತ್ತಿ ರುವುದಾಗಿ ತಿಳಿಸಿದ್ದು, ಮುಂದಿನ ರಾಜಕೀಯ ನಡೆ  ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

ಪ್ರತಿಕ್ರಿಯಿಸಿ (+)