ಶುಕ್ರವಾರ, ಮೇ 20, 2022
27 °C

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುರಗೋಡ (ಬೈಲಹೊಂಗಲ):ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಯರಗಟ್ಟಿ-ಗೋಕಾಕ ರಸ್ತೆಯ ಸವದತ್ತಿ ತಾಲ್ಲೂಕಿನ ಯರಗಣವಿ ಬಳಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ.ಮೃತರನ್ನು ಸವದತ್ತಿ ತಾಲ್ಲೂಕಿನ ಗೊರಗುದ್ದಿ ಗ್ರಾಮದ ಯಲ್ಲಪ್ಪ ಕಲ್ಲೊಳೆಪ್ಪ ಗೌರಿ ಉರ್ಫ್ ಸುಣದೊಳ್ಳಿ (45), ಪುಂಡಲೀಕ ಶಿವಲಿಂಗಪ್ಪ ಹುರುಳಿ (18), ರಾಮದುರ್ಗ ತಾಲ್ಲೂಕಿನ ಚಿಲಮೂರ ಗ್ರಾಮದ ನಾಗಪ್ಪ ಗಂಗಪ್ಪ ಕಲ್ಲೇಶಿ (24) ಎಂದು ಗುರುತಿಸಲಾಗಿದೆ. ರಸ್ತೆ ಬದಿಗೆ ನಿಂತ ಲಾರಿಗೆ ಬೈಕ್ ಹಿಂದಿನಿಂದ ಡಿಕ್ಕಿ ಹೊಡೆಯಿತೆನ್ನಲಾಗಿದೆ.ಮೃತರು ಬೈಕ್ ಮೇಲೆ ಯರಗಟ್ಟಿಯಿಂದ ಗೊರಗುದ್ದಿಗೆ ಹೊರಟಿದ್ದರು. ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಗಂಗರೆಡ್ಡಿ, ಡಿವೈಎಸ್‌ಪಿ ಎಸ್.ಬಿ. ಪಾಟೀಲ ಭೇಟಿ ನೀಡಿದರು. ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.