ನಿಂದಕರಿರಬೇಕು

7

ನಿಂದಕರಿರಬೇಕು

Published:
Updated:

`ಟೀಕೆಗಳನ್ನು ನಗುನಗುತ್ತ ಸ್ವೀಕರಿಸಿ. ತಾರೆಯಾದವರು, ಸಾರ್ವಜನಿಕ ರಂಗದಲ್ಲಿ ಅತಿ ಹೆಚ್ಚು ಗಮನ ಸೆಳೆಯುವವರು, ಗಟ್ಟಿ ಮನಸಿನವರಾಗಿರಬೇಕು~ ಎಂದು ಬಿಪಾಶಾ ಬಸು ಹೇಳುತ್ತಿದ್ದಾರೆ.ಈ ಗಟ್ಟಿಗಿತ್ತಿ ಸದ್ಯ `ರಾಜ್ 3ಡಿ~ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ. `ಜನ ಸದಾ ಸೆಲೆಬ್ರಿಟಿಗಳನ್ನು ಕಣ್ಣಲ್ಲೇ ಸ್ಕ್ಯಾನ್ ಮಾಡುತ್ತಿರುತ್ತಾರೆ. ನನ್ನ ಸ್ಟೈಲನ್ನು ಯಾವಾಗಲೂ ಗಮನಿಸಲಾಗುತ್ತದೆ. ಹಾಗಾಗಿ ಅವರು ಪ್ರಯೋಗಕ್ಕೆ ಸದಾ ಸಿದ್ಧರು. ಕೇಶ ವಿನ್ಯಾಸವಿರಲಿ, ಕಂಗಳ ಅಲಂಕಾರವಿರಲಿ, ಉಡುಗೆ ತೊಡುಗೆಗಳಾಗಿರಲಿ ಪ್ರಯೋಗಕ್ಕೆ ಸದಾ ತೆರೆದುಕೊಳ್ಳುವಲ್ಲಿ ನಾನು ಹಿಂದೆ ಬಿದ್ದಿಲ್ಲ. ಹೀಗೆ ಜನ ನಮ್ಮನ್ನು ಗುರುತಿಸುವಾಗ ಟೀಕೆಗಳು ಎದುರಾಗುವುದು ಕೂಡ ಸಹಜವೇ. ಅವನ್ನೆಲ್ಲಾ ನಗುನಗುತ್ತಾ ಸ್ವೀಕರಿಸಬೇಕಷ್ಟೆ~ ಎಂಬುದು ಬಿಪಾಶಾ ನುಡಿ.ಮೊದಲ ಸಲ `ಸ್ಮೋಕ್ ಐ ಮೇಕಪ್~ ಹಾಕಿಸಿಕೊಂಡಾಗ ಜನ ಅವರನ್ನು `ಕಾಡು ಬೆಕ್ಕು~ ಎಂದು ಕರೆದಿದ್ದರು. ಮಾರ್ಜಾಲ ನಡಿಗೆ ಮಾಡಿಯೇ ಈ ಟೀಕೆಗೆ ಅವರು ಉತ್ತರ ಕೊಟ್ಟಿದ್ದರು. `ರಾಝ್- 3ಡಿ~ ಚಿತ್ರದಲ್ಲಿ ಪ್ರೀತಿ, ಪ್ರೇಮ, ಭೀತಿ ಎಲ್ಲವೂ ಇದೆ ಎಂಬುದು ಅವರ `ಒನ್‌ಲೈನ್ ತಿರುಳು~.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry