ನಿಖಿತಾ ನಿಷೇಧ ಸರಿಯಲ್ಲ: ಶಿವರಾಜ್‌ಕುಮಾರ್

ಶುಕ್ರವಾರ, ಮೇ 24, 2019
23 °C

ನಿಖಿತಾ ನಿಷೇಧ ಸರಿಯಲ್ಲ: ಶಿವರಾಜ್‌ಕುಮಾರ್

Published:
Updated:

ಮೈಸೂರು: ದರ್ಶನ್ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಚಿತ್ರ ನಟಿ ನಿಖಿತಾ ಅವರಿಗೆ ನಿಷೇಧ ಹೇರಿರುವುದು ಸರಿಯಲ್ಲ, ನಿರ್ಮಾಪಕರ ಸಂಘದವರು ನಿಷೇಧ ಹೇರುವ ಮೊದಲು ಯೋಚನೆ ಮಾಡಬೇಕಾಗಿತ್ತು ಎಂದು ಚಿತ್ರ ನಟ ಶಿವರಾಜ್‌ಕುಮಾರ್ ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.ಪತ್ರಕರ್ತರೊಂದಿಗೆ ಮತನಾಡಿದ ಅವರು `ಇದೊಂದು ಆತುರದ ನಿರ್ಧಾರ. ಏನೇ ತಪ್ಪು ಮಾಡಿದರೂ ಅದನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ನಿರ್ಮಾಪಕರ ಸಂಘ ಈ ವಿಷಯದಲ್ಲಿ ಎಡವಿದೆ~ ಎಂದರು.

 

ದರ್ಶನ್ ವರ್ತನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶಿವರಾಜ್‌ಕುಮಾರ್ ದರ್ಶನ್ ಕುಟುಂಬ ಚೆನ್ನಾಗಿರಲಿ ಎಂದಷ್ಟೇ ಹೇಳಿದರು.ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ನಂತರ ಕಲಾವಿದರು ಒಂದೆಡೆ ಸೇರಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry