ಮಂಗಳವಾರ, ಮೇ 24, 2022
26 °C
ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ

ನಿಖಿತ್, ಅಕ್ಷಯ್ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಗ್ರ ಶ್ರೇಯಾಂಕದ ನಿಖಿತ್ ಲಕ್ಷ್ಮಣ್ ಹಾಗೂ ಎರಡನೇ ಶ್ರೇಯಾಂಕ ಹೊಂದಿರುವ ಎಸ್. ಅಕ್ಷಯ್ ಶ್ರೀನಿವಾಸ್, ಸನ್‌ಲೈಟ್ಸ್ ಫೈವ್ ಸ್ಟಾರ್ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 15 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು.ಶ್ರೀಸಾಯಿ ಸ್ಪೋರ್ಟ್ಸ್ ಸಂಸ್ಥೆಯ ಕ್ಲಬ್‌ನಲ್ಲಿ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಡಬ್ಲ್ಯುಪಿಬಿಎ ಕ್ಲಬ್‌ನ ನಿಖಿತ್ 21-4, 21-7ರಲ್ಲಿ ತಮ್ಮದೇ ಕ್ಲಬ್‌ನ ಶಶಾಂಕ್ ರೆಡ್ಡಿ ಅವರನ್ನು ಮಣಿಸಿದರೆ, ಎನ್‌ಜಿವಿ ಕ್ಲಬ್‌ನ ಅಕ್ಷಯ್ 21-8, 21-4ರಲ್ಲಿ ಡಬ್ಲ್ಯುಪಿಬಿಎ ಕ್ಲಬ್‌ನ ರೇವಂತ್ ಎದುರು ಗೆಲುವು ಪಡೆದು ಎರಡನೇ ಸುತ್ತು ಪ್ರವೇಶಿಸಿದರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ನಿಖಿಲ್‌ಶ್ಯಾಮ್ ಶ್ರೀರಾಮ್ 21-13, 21-7ರಲ್ಲಿ ಎಸ್. ಭಾರ್ಗವ್ ಮೇಲೂ, ಸಾಯಿಪ್ರತೀಕ್ 21-7, 21-18ರಲ್ಲಿ ಸಿ.ಎಸ್. ಪೊನ್ನಪ್ಪ ವಿರುದ್ಧವೂ, ಶಮದೀಪ್ ಮಂಡಲ್ 21-15, 12-21, 24-22ರಲ್ಲಿ  ಶ್ರೀಕರ್ ರಾಜೇಶ್ ಮೇಲೂ, ಎಸ್. ಅವಿನಾಶ್ 21-15, 21-16ರಲ್ಲಿ ಪೃಥ್ವಿ ನಿರಂಜನ್ ವಿರುದ್ಧವೂ, ಕೆ. ಅಭಿರಾಮ್ 18-21, 21-12, 21-15ರಲ್ಲಿ ಎಸ್. ಆಕಾಶ್ ಮೇಲೂ, ಸೌರವ್ ಯಾದವ್ 21-14, 18-21, 21-13ರಲ್ಲಿ ಎಸ್. ಅಶ್ವಿನ್ ವಿರುದ್ಧವೂ, ಸೈಫ್ ಅಲಿ 21-11, 21-3ರಲ್ಲಿ ಪಿ. ಅಮೋಘ್ ಮೇಲೂ ಗೆಲುವು ಪಡೆದು ಎರನೇ ಸುತ್ತಿಗೆ ಮುನ್ನಡೆದರು.ಮೊದಲ ಸುತ್ತಿನ ಇನ್ನಷ್ಟು ಪಂದ್ಯಗಳಲ್ಲಿ ಸಮೀರ್ ಸುಬೇದಾರ್ 21-10, 21-14ರಲ್ಲಿ ಎಸ್. ಸನೀತ್ ದಯಾನಂದ್ ಮೇಲೂ, ಎಂ.ಎಲ್. ಕೆವಿನ್ 21-11, 21-17ರಲ್ಲಿ ಎಂ. ರೋಹಿತ್ ಕೃಷ್ಣ ವಿರುದ್ಧವೂ, ವಿ. ಗಣೇಶ್ 15-21, 21-17, 21-19ರಲ್ಲಿ ಬಿ. ಕಿರಣ್ ಮೇಲೂ, ಸಾಕೇತ್ ಉಪಾಧ್ಯ 21-14, 17-21, 24-22ರಲ್ಲಿ ಜಿ. ವಾಸೀಂ ಖಾನ್ ವಿರುದ್ಧವೂ, ಕೆ. ಪೃಥ್ವಿರಾಯ್ 12-21, 21-13, 22-20ರಲ್ಲಿ ಶಮಂತ್ ರಾವ್ ಮೇಲೂ ಗೆಲುವು ಸಾಧಿಸಿದರು.ಡಬ್ಲ್ಯುಪಿಬಿಎ ಕ್ಲಬ್‌ನ ಎನ್. ಶ್ರೀಹರಿ ಗುಪ್ತಾ ಅವರು ಆರ್‌ಬಿಎ ಕ್ಲಬ್‌ನ ಅಭಿ ಅಮುಧನ್ ಎದುರು `ವಾಕ್ ಓವರ್' ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.