ನಿಗದಿಯಂತೆ ಕೆಎಎಸ್ ಪರೀಕ್ಷೆ

7

ನಿಗದಿಯಂತೆ ಕೆಎಎಸ್ ಪರೀಕ್ಷೆ

Published:
Updated:

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ 15ರಿಂದ ಜನವರಿ 6ರ ವರೆಗೆ ನಡೆಸಲಿರುವ ಕೆಎಎಸ್ ಮುಖ್ಯ ಪರೀಕ್ಷೆಗಳನ್ನು ಮುಂದೂಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮಂಗಳವಾರ ವಜಾ ಮಾಡಿದೆ.ಇದರಿಂದಾಗಿ ಪೂರ್ವ ನಿಗದಿಯಂತೆ ಕೆಎಎಸ್ ಮುಖ್ಯ ಪರೀಕ್ಷೆ ನಡೆಯಲಿದೆ.

`ಪರೀಕ್ಷೆ ನಡೆಸುವುದು ಆಡಳಿತಾತ್ಮಕ ನಿರ್ಧಾರ. ಅದರಲ್ಲಿ ಮಧ್ಯಪ್ರವೇಶ ಮಾಡಲು ಇಚ್ಛಿಸುವುದಿಲ್ಲ. ನಾಲ್ಕಾರು ಅಭ್ಯರ್ಥಿಗಳ ಅನುಕೂಲಕ್ಕಾಗಿ ಸಹಸ್ರಾರು ಅಭ್ಯರ್ಥಿಗಳಿಗೆ ತೊಂದರೆ ಆಗಬಾರದು' ಎಂದು ಪೀಠ ಹೇಳಿದೆ.`ಕೆಎಎಸ್ ಮುಖ್ಯ ಪರೀಕ್ಷೆ ಸಮಯದಲ್ಲೇ ವಲಯ ಅರಣ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಆದ್ದರಿಂದ ಕೆಎಎಸ್ ಪರೀಕ್ಷೆ ಮುಂದೂಡುವಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ವಿಶ್ವನಾಥ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾ ಮಾಡಿದ್ದ ಹೈಕೋರ್ಟ್, `ಅರ್ಜಿದಾರರು ಕೆಎಟಿ ಮೊರೆ ಹೋಗಬಹುದು' ಎಂದು ಹೇಳಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry