ಮಂಗಳವಾರ, ಜನವರಿ 28, 2020
17 °C

ನಿಗಮ–ಮಂಡಳಿ: ನಾಳೆ ನಿರ್ಧಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭಾ ಚುನಾ­ವಣೆ­ಗೆ ಮೊದಲೇ ನಿಗಮ – ಮಂಡಳಿ­ಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದ್ದು, ಶನಿವಾರ ನಡೆಯುವ ಕೆಪಿಸಿಸಿ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ನಿಗಮ – ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ 5 ಸಾವಿರ­ಕ್ಕೂ ಅಧಿಕ ಆಕಾಂಕ್ಷಿಗಳು ಈಗಾ­ಗಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಮುಖ್ಯಮಂತ್ರಿ ಅವರಿಗೆ ಮನವಿ ನೀಡಿದ್ದಾರೆ.ಸಮನ್ವಯ ಸಮಿತಿ ಸಭೆಯಲ್ಲಿ ಅವು­ಗಳನ್ನೆಲ್ಲ ಪರಿಶೀಲಿಸಿ ಮೊದಲ ಹಂತದಲ್ಲಿ 20ರಿಂದ 25 ಜನ ಶಾಸಕ­ರು,  ಕಾರ್ಯಕರ್ತರನ್ನು ನೇಮಕ ಮಾಡ­ಲಾಗುತ್ತದೆ ಎಂದು ಗೊತ್ತಾಗಿದೆ.ಒಂದೇ ಹಂತದಲ್ಲಿ ನೇಮಕ ಮಾಡಿದರೆ ಅವಕಾಶ ಸಿಗದವರು ಅಸಮಾಧಾನಗೊಳ್ಳಬಹುದು ಎಂಬ ಕಾರಣಕ್ಕೆ ಎರಡು ಹಂತಗಳಲ್ಲಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಸಮಿತಿಗಳಿಗೆ ಮೊದಲ ಹಂತದಲ್ಲಿ ನೇಮಕ ಮಾಡ­ಲಾಗುತ್ತದೆ. ಅಲ್ಲಿ ಅವಕಾಶ ಸಿಗ­ದವರಿಗೆ, ಪಕ್ಷಕ್ಕಾಗಿ ಹಲವು ವರ್ಷ­ಗಳಿಂದ ದುಡಿಯುತ್ತಿರುವ ಕಾರ್ಯ­ಕರ್ತ­ರಿಗೆ ರಾಜ್ಯಮಟ್ಟದಲ್ಲಿ ನೇಮಕಕ್ಕೆ  ಆದ್ಯತೆ ನೀಡಲಾಗುತ್ತದೆ ಎಂದು ಮುಖಂಡರೊಬ್ಬರು ತಿಳಿಸಿದರು.ಅಭ್ಯರ್ಥಿಗಳ ಪಟ್ಟಿ: ರಾಜ್ಯ ಉಸ್ತುವಾರಿ ದಿಗ್ವಿಜಯ್‌ ಸಿಂಗ್ ಸಮ್ಮುಖದಲ್ಲಿ ಕೆಪಿಸಿಸಿ ಚುನಾವಣಾ ಸಮಿತಿ ಸಭೆ ಶನಿವಾರ ನಡೆಯಲಿದ್ದು, ಲೋಕಸಭಾ ಚುನಾವಣೆಗೆ ಸಂಭವ­ನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)