ಬುಧವಾರ, ಜೂನ್ 23, 2021
30 °C

ನಿಗೂಢೆ ಭೇದಿಸಲು ಗುರು ಬೇಕು: ಇಬ್ರಾಹಿಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಲಿಂಗಪುರ: ಅಭಿಮಾನದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡವನನ್ನು ಗುರು ಮಾತ್ರ ಪಾರು ಮಾಡಬಲ್ಲ. ಮಾತು ಮನಂಗಳಿತ್ತತ್ತ ದೂರವಿರುವ ಭಗವಂತನ ಸಾಕ್ಷಾತ್ಕಾರ ಗುರುವಿನಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಪ್ರವಚನಕಾರ ಇಬ್ರಾಹಿಂ ಸುತಾರ ಹೇಳಿದರು.ಇಲ್ಲಿಯ ಡಪಳಾಪುರ ಸಹೋದರರ ತೋಟದ ಮನೆಯಲ್ಲಿ ನಡೆದ 40ನೇ ಹೋಳಿ ಹಬ್ಬದ ಶಿವಾನುಭವ ಕಾರ್ಯಕ್ರಮದಲ್ಲಿ ಗುರು ಹಾಗೂ ದೇವರ ಸಾಕ್ಷಾತ್ಕಾರ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿ­ದರು. ದೇವರು ಕಲ್ಲಿನಲ್ಲಿರುವ ಬಂಗಾರ ಹಾಗೂ ಹಾಲಿನೊಳಗಿನ ತುಪ್ಪದಂತಿ­ರುತ್ತಾನೆ, ಅನುಭೂತಿಯ ಅನುಭವ­ವನ್ನು ಗುರು ಮಾತ್ರ ಮಾಡಿಸಬಲ್ಲನು, ಇತಿಹಾಸ ಹಾಗೂ ವರ್ತಮಾನ ಯಾವುದೇ ಕಾಲದಲ್ಲೂ ಗುರುವಿಗೆ ಪ್ರಾಮುಖ್ಯತೆ ಇದೆ ಎಂದು ತಿಳಿಸಿದರು.ಪ್ರತಿ ವರ್ಷ ಹೋಳಿ ಹಬ್ಬದ ಮರುದಿನ ಓಕಳಿಯನ್ನು ಬಹಿಷ್ಕರಿಸಿ ವೈಚಾರಿಕ ಓಕಳಿಯನ್ನು ನಡೆಸುತ್ತಿರುವ ಡಪಳಾಪುರ ಸಹೋದರರು ಭಜನೆ, ಜಾನಪದ ಗೋಷ್ಠಿ, ಸಂವಾದ, ವಚನಗೋಷ್ಠಿಗಳನ್ನು ನಡೆಸುವ ಮೂಲಕ ಸಮಾಜ ಪರಿವರ್ತನೆಗೆ ಕಾರಣರಾಗಿದ್ದಾರೆ ಈ ಸಂಸ್ಕೃತಿ ಮುಂದುವರೆಯಲಿ ಎಂದು ಹೇಳಿದರು.ಅನುಭಾವಗೊಷ್ಠಿಯಲ್ಲಿ ಕಂಕನವಾ­ಡಿಯ ಮಾರುತಿ ಶರಣರು ಮಾತನಾಡಿದರು. ಬೆಳಗಲಿ, ಮಹಾಲಿಂಗಪುರ ಹಾಗೂ ಸುತ್ತಲಿನ ಭಜನಾ ಮಂಡಳಿಗಳು ವಿವಿಧ ಭಜನೆ, ತತ್ವ ಪದ, ಜಾನಪದ ಗೀತೆ ಹಾಗೂ ವಚನಗಳನ್ನು ಹಾಡಿ ಗಮನ ಸೆಳೆದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಗಮೇಶ ಕೋಟಿ ಅವರನ್ನು ಸನ್ಮಾನಿಸಲಾಯಿತು.ಹಿರಿಯ ಭಜನಾ ಕಲಾವಿದ ಶಂಕ್ರಪ್ಪ ಚವಲದ, ಅಪ್ಪಣ್ಣ ಯಾದವಾಡ, ವೀರಣ್ಣ ಮುಂಡಗನೂರ, ಸೋಮಯ್ಯ ಹಿರೇಮಠ, ಕಾಶೀನಾಥ ಜವಳಗಿ, ರಾಜು ಹಳಿಂಗಳಿ, ಈಶ್ವರಪ್ಪ ಮುಂಡಗನೂರ, ಮೆಹಬೂಬ್‌ ಸನದಿ, ಮಲ್ಲಪ್ಪಣ್ಣ ಶಿರೋಳ ಹಾಗೂ ಮಹಾದೇವಪ್ಪ ಕರಡಿ  ಭಜನೆ, ತತ್ವಪದ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀಶೈಲಪ್ಪ ಉಳ್ಳೇ­ಗಡ್ಡಿ, ಮ.ಕೃ. ಮೇಗಾಡಿ, ಜವಾಹರ ಹಂಚಾಟೆ, ಮಲ್ಲೇಶಪ್ಪ ಕಟಗಿ, ಅಣ್ಣಿಗೇರಿ ಗುರುಗಳು, ಡಾ.ಹಿಡಕಲ್ ಭಾಗವಹಿಸಿದ್ದರು. ಚಂದ್ರಶೇಖರ ಮೋರೆ ಕಾರ್ಯಕ್ರಮ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.