ನಿಗೂಢ ರೋಗ: 13 ಮಕ್ಕಳ ಸಾವು

ಮಂಗಳವಾರ, ಜೂಲೈ 23, 2019
25 °C

ನಿಗೂಢ ರೋಗ: 13 ಮಕ್ಕಳ ಸಾವು

Published:
Updated:

ಪಟ್ನಾ, (ಐಎಎನ್‌ಎಸ್): ಕಳೆದ ಐದು ದಿನಗಳಲ್ಲಿ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಿಗೂಢ ಕಾಯಿಲೆಯಿಂದ 13 ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಇವರಲ್ಲಿ ಐವರು ಮಕ್ಕಳು 48 ಗಂಟೆಗಳಲ್ಲೇ ಬಲಿಯಾಗಿದ್ದಾರೆ.ಕಳೆದ 5 ದಿನಗಳಲ್ಲಿ ಒಟ್ಟು 13 ಮಕ್ಕಳು ನಿಗೂಢ ಕಾಯಿಲೆಯಿಂದ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಕ್ಕಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.ಮುಜಾಫರ್‌ಪುರದಿಂದ ಜಿಲ್ಲಾ ಸರ್ಜನ್ ಎ.ಪಿ. ಸಿಂಗ್ ಸುದ್ದಿಸಂಸ್ಥೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈ ಸಾವಿಗೆ ನಿಖರವಾದ ಕಾರಣ ಇದುವರೆಗೂ ತಿಳಿದು ಬಂದಿಲ್ಲ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry