ಸೋಮವಾರ, ಜನವರಿ 20, 2020
29 °C

ನಿಘಂಟು: ಬಸವರಾಧ್ಯ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಶಬ್ಧಗಳ ಬಗ್ಗೆ ಖಚಿತವಾದ ತಿಳಿವಳಿಕೆ ಇದ್ದ ಎನ್.ಬಸವಾರಾಧ್ಯ ಅವರಂತಹ ನಿಘಂಟುತಜ್ಞರನ್ನು ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ’ ಎಂದು ಹಿರಿಯ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಅವರು ವಿಷಾದ ವ್ಯಕ್ತಪಡಿಸಿದರು.ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ  ಎನ್.ಬಸವಾರಾಧ್ಯ ಅವರ ಶ್ರದ್ಧಾಂ ಜಲಿ ಸಭೆಯಲ್ಲಿ ಮಾತನಾಡಿದರು.‘ದುಡ್ಡಿನ ಬಗ್ಗೆ ಮೋಹ ಬೆಳಸಿ ಕೊಳ್ಳದ ಸರಳ ಸಜ್ಜನಿಕೆ ವ್ಯಕ್ತಿ ಅವ ರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ನಿಘಂಟು ರೂಪಿಸುವ ಸಲುವಾಗಿ ಅವರು ಪಟ್ಟ ಶ್ರಮ ಶ್ರೇಷ್ಠವಾದದ್ದು’ ಎಂದರು.ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎಂ.ಎಚ್.ಕೃಷ್ಣಯ್ಯ ಮಾತನಾಡಿ,  ‘ಇಡೀ ಜೀವನವನ್ನು ಕನ್ನಡ ಕ್ಕಾಗಿ ಮುಡುಪಿಟ್ಟ ಬಸವಾ ರಾಧ್ಯ ಅಂತಹ ದೊಡ್ಡವರು ಇರುವ ಈ ನೆಲವೇ  ಧನ್ಯ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)