ಭಾನುವಾರ, ಮಾರ್ಚ್ 26, 2023
31 °C
ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಚಂದ್ರ ಪೂಜಾರಿ ಪ್ರಶ್ನೆ

ನಿಜಕ್ಕೂ ದೇಶದಲ್ಲಿ ಸ್ವಾತಂತ್ರ್ಯವಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಜಕ್ಕೂ ದೇಶದಲ್ಲಿ ಸ್ವಾತಂತ್ರ್ಯವಿದೆಯೇ?

ಮಂಗಳೂರು: ‘ಬೇಕೆನಿಸಿದ ಆಹಾರ ವನ್ನು ತಿನ್ನಲಾಗದ, ಇಷ್ಟವಾದ ಉಡುಗೆ ಯನ್ನು ತೊಡಲಾಗದ, ನಂಬಿದ ದೇವ ರನ್ನು ಪೂಜಿಸಲಾಗದ ಸ್ಥಿತಿಯಲ್ಲಿ ಭಾರ ತದ ತಳಸ್ತರದ ಜನರು ಇದ್ದಾರೆ. ನಿಜವಾ ಗಿಯೂ ದೇಶದಲ್ಲಿ ಸ್ವಾತಂತ್ರ್ಯವಿದೆಯೇ?’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಚಂದ್ರ ಪೂಜಾರಿ ಪ್ರಶ್ನಿಸಿದರು.‘ರಚನಾತ್ಮಕ ಸಮಾಜಕ್ಕಾಗಿ ಸಂತು ಲಿತ ಚಿಂತನೆ: ತೀವ್ರವಾದವನ್ನು ವಿರೋ ಧಿಸೋಣ, ಹಿತವಾದಿಗಳಾಗೋಣ’ ಎಂ ಬ ಘೋಷ ವಾಕ್ಯದಡಿ ಸ್ಟೂಡೆಂಟ್ ಇಸ್ಲಾ ಮಿಕ್ ಆರ್ಗನೈಸೇಷನ್‌ (ಎಸ್‌ಐಒ) ನಗ ರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ವಲಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಶೇಕಡ 5ರಷ್ಟು ಜನರ ಹಿತಾಸಕ್ತಿಗೆ ತಕ್ಕಂತೆ ಉಳಿದವರು ಬದುಕಬೇಕಾದ ಪರಿಸ್ಥಿತಿ ದೇಶದಲ್ಲಿದೆ.ಆಹಾರ, ಉಡುಗೆ, ಧಾರ್ಮಿಕ ನಂಬಿಕೆ ಗಳ ವಿಚಾರದಲ್ಲಿ ಭಯದಲ್ಲಿ ಬದುಕ ಬೇಕಾದ ವಾತಾವರಣ ಇದೆ. ಯುವ ಜನರು ಪ್ರೀತಿಸಿ ಮದುವೆಯಾಗುವ ಸ್ವಾತಂತ್ರ್ಯವೂ ಇಲ್ಲ. ಇದನ್ನು ಸ್ವಾತಂತ್ರ್ಯ ಎನ್ನಲಾದೀತೆ?’ ಎಂದರು.ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೇಳಿಕೆಗಳು ಕಲ್ಪನೆಯ ರೀತಿ ಕಾಣುತ್ತಿವೆ. ಬ್ರಿಟಿಷ್ ಅನುಸರಿಸುತ್ತಿದ್ದ ಮೇಲ್ವರ್ಗಗಳ ಪರ ವಾದ ಮತ್ತು ದೌರ್ಜನ್ಯಕ್ಕೆ ಎಡೆಮಾಡಿ ಕೊಡುವ ಆಡಳಿತ ವ್ಯವಸ್ಥೆಯೇ ಈಗಲೂ ಇದೆ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಗಳಲ್ಲಿ ಮತ ಚಲಾಯಿಸುವ ಅವಕಾಶ ಬಿಟ್ಟರೆ ತಳಸ್ತರದ ಜನರಿಗೆ ಏನೂ ದೊರಕಿಲ್ಲ. ಇದು ಪ್ರಜಾಪ್ರಭುತ್ವ ಎನ್ನುವುದಕ್ಕಿಂತಲೂ ಬ್ರಿಟಿಷ್‌ ಆಳ್ವಿಕೆಯ ಪಳೆಯುಳಿಕೆಯಂತೆಯೇ ಕಾಣುತ್ತಿದೆ ಎಂದು ಹೇಳಿದರು.‘ಭಾರತೀಯ ಸಮಾಜವು ಪಿರಮಿ ಡ್‌ನ ಸ್ವರೂಪದಲ್ಲಿದೆ. ಪಿರಮಿಡ್‌ನ ಅಡಿ ಪಾಯದಂತೆ ಇರುವ ತಳಸ್ತರದ ಜನರ ಸಂಖ್ಯೆ ಶೇ 70ರಷ್ಟಿದೆ. ಆದರೆ, ಅವರಿಗೆ ರಾಜಕೀಯ, ಅರ್ಥ ವ್ಯವಸ್ಥೆ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಂಖ್ಯೆಗೆ ಸಮ ನಾದ ಪ್ರಾತಿನಿಧ್ಯ ದೊರಕಿಲ್ಲ. ದೇಶದ ಜನಸಂಖ್ಯೆಯ ಶೇ 13ರಷ್ಟಿಸುವ

ಅಲ್ಪಸಂಖ್ಯಾತರಿಗೆ ಶೇ 3ರಷ್ಟು ಅವಕಾಶಗಳು ಮಾತ್ರ ದೊರೆಯುತ್ತಿವೆ’ ಎಂದರು.ಹಿಂಸೆಯ ದಾರಿ ಬೇಡ: ಸಮಾನತೆಯನ್ನು ಸಾಧಿಸುವುದೇ ದೇಶದ ಯುವಜನರ ಪ್ರಮುಖ ಗುರಿಯಾಗಬೇಕು. ಮೇಲ್ವರ್ಗ ದ ಜನರನ್ನು ಕೇಂದ್ರೀಕರಿಸಿದ ವ್ಯವಸ್ಥೆ ಯಿಂದ ಆದ ಶೋಷಣೆ, ಹಿಂಸೆ, ದೌರ್ಜ ನ್ಯಗಳಿಗೆ ಪ್ರತ್ಯುತ್ತರ ನೀಡಲು ಹಿಂಸೆಯ ದಾರಿ ಆಯ್ಕೆ ಮಾಡಿಕೊಳ್ಳಬಾರದು. ದಲಿತರು, ಅಲ್ಪಸಂಖ್ಯಾತರು, ಹಿಂದು ಳಿದ ವರ್ಗಗಳು ಸೇರಿದಂತೆ ತಳಸ್ತರದ ಎಲ್ಲ ಸಮುದಾಯಗಳ ಜನರು ಸೇರಿ ಕೊಂಡು ಈ ಸಂಚನ್ನು ಎದುರಿಸಬೇಕು ಎಂದು ಚಂದ್ರ ಪೂಜಾರಿ ಸಲಹೆ ನೀಡಿದರು.ಜಮಾಅತೆ ಇಸ್ಲಾಮೀ ಹಿಂದ್‌ ಅಧ್ಯಕ್ಷ ಮಹಮ್ಮದ್ ಕುಂಞಿ, ಎಸ್‌ಐಒ ರಾಷ್ಟ್ರೀಯ ಘಟಕದ ಅಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿದರು.ಸಂಘಟನೆಯ ರಾಷ್ಟ್ರೀಯ ಘಟಕದ ಮಾಜಿ ಅಧ್ಯ ಕ್ಷ ಅಶ್ಫಾಕ್ ಅಹ್ಮದ್ ಷರೀಫ್, ಜಮಾ ಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಂ, ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಘಟಕದ ಅಧ್ಯಕ್ಷ ಇಲ್ಯಾಸ್ ಇಸ್ಮಾಯಿಲ್, ಎಸ್‌ಐಒ ರಾಜ್ಯ ಘಟಕದ ಕಾರ್ಯದರ್ಶಿ ಮಾಝ್ ಸಲ್ಮಾನ್ ಮನಿಯಾರ್, ಮಾಜಿ ಕಾರ್ಯದರ್ಶಿ ಶೌಕತ್ ಅಲಿ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ರಫೀಕ್ ಬೀದರ್, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.ಧರ್ಮದ ಹೆಸರಿನಲ್ಲಿ ವಿಭಜನೆ

ಎಸ್‌ಐಒ ರಾಜ್ಯ ಘಟಕದ ಅಧ್ಯಕ್ಷ ಲಬೀದ್ ಶಾಫಿ ಮಾತನಾಡಿ, ‘ಕೋಮುವಾದಿ ಶಕ್ತಿಗಳು ಶಿಕ್ಷಣ ಸಂಸ್ಥೆಗಳ ಆವರಣ ಪ್ರವೇಶಿಸಿ ಧರ್ಮದ ಹೆಸರಿನಲ್ಲಿ ಯುವ ಜನತೆಯನ್ನು ವಿಭಜಿಸುವ ಕೆಲಸ ಮಾಡುತ್ತಿವೆ. ಯುವ ಜನರು ಹಿಂಸಾವಿನೋದಿಗಳಾಗುತ್ತಿದ್ದಾರೆ. ಸುಶಿಕ್ಷಿತ ಜನರೇ ಕೋಮುವಾದ ಮತ್ತು ಉಗ್ರವಾದವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆಗಳನ್ನು ತಡೆಯುವ ಉದ್ದೇಶದಿಂದ ಸಂಘಟನೆಯು ಈ ಅಭಿಯಾನ ಆರಂಭಿಸಿದೆ’ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿಗೂ ಸಂಭ್ರಮಿಸುವ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಅವರು,  ಇದು ಯುವಜನರು ತಮಗರಿವಿಲ್ಲ ದಂತೆಯೇ ಕೋಮುವಾದಿ ಶಕ್ತಿಗಳ ಬಿಗಿ ಹಿಡಿತಕ್ಕೆ ಸಿಲುಕುತ್ತಿರುವುದರ ಮುನ್ಸೂಚನೆಯಾಗಿರುವಂತಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.