ನಿಜವಾದ ಪ್ರತಿಭೆ ಇರುವವರು ಶ್ರೇಷ್ಠವಾದದ್ದು ಸೃಷ್ಟಿಸಬಲ್ಲರು

7

ನಿಜವಾದ ಪ್ರತಿಭೆ ಇರುವವರು ಶ್ರೇಷ್ಠವಾದದ್ದು ಸೃಷ್ಟಿಸಬಲ್ಲರು

Published:
Updated:

ಬೆಂಗಳೂರು: `ನಿಜವಾದ ಪ್ರತಿಭೆ ಇರುವವರು ಶ್ರೇಷ್ಠವಾದದ್ದನ್ನು ಸೃಷ್ಟಿಸಬಲ್ಲರು ಎಂಬುದಕ್ಕೆ ಡುಂಡಿರಾಜ್ ಉತ್ತಮ ಉದಹರಣೆ~ ಎಂದು ಹಿರಿಯ ಸಾಹಿತಿ ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕ ಪ್ರಕಾಶನ ಹೊರತಂದಿರುವ ಎಚ್.ಡುಂಡಿರಾಜ್ ಅವರ `ಹನಿಗಾರಿಕೆ~ ಮತ್ತು `ಬನ್ನಿ ನಮ್ಮ ಹಾಡಿಗೆ~ ಪುಸ್ತಕಗಳನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.`ಡುಂಡಿರಾಜ್ ಕೃಷಿ ವಿಜ್ಞಾನವನ್ನು ಅಭ್ಯಾಸ ಮಾಡಿದ್ದರೂ, ಸಾಹಿತ್ಯದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿದ್ದಾರೆ. ದೇವರಲ್ಲಿ ಮೊದಲಿಗರು ಗಣರಾಜನಾದರೆ, ಹನಿಗವನಗಳನ್ನು ರಚಿಸುವಲ್ಲಿ ಪರಿಣಿತರು ಡುಂಡಿರಾಜರು~ ಎಂದು ಹರ್ಷವ್ಯಕ್ತಪಡಿಸಿದರು.`ಗಂಭೀರ ವಿಚಾರಗಳನ್ನು ಹಾಸ್ಯ ಮಿಶ್ರಿತ ಪದಗಳ ಮೂಲಕ ಜನರಿಗೆ ಸಂತೋಷವನ್ನು ನೀಡುತ್ತಿರುವ ಇವರ ಹನಿಗವನಗಳ ಬಗ್ಗೆ ವಿಮರ್ಶಾ ವಲಯದಲ್ಲಿ ಹೆಚ್ಚಿನ ಚರ್ಚೆ ನಡೆಯಬೇಕು~ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಿ.ಆರ್.ಲಕ್ಷ್ಮಣರಾವ್, ಜರಗನಹಳ್ಳಿ ಶಿವಶಂಕರ್, ಚಿಂತಾಮಣಿ ಕೊಡ್ಲೆಕೆರೆ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry