ನಿಜ ಜೀವನದಲ್ಲಿ ರೌಡಿ ಅಲ್ಲ
ಅದ್ಯಾಕೆ ಈಗ `ರೌಡಿ~ ಹೆಸರಿನಿಂದ ನನ್ನನ್ನು ಗುರುತಿಸುತ್ತಿದ್ದಾರೋ? ರೀಲ್ ಜೀವನಕ್ಕೂ ರಿಯಲ್ ಜೀವನಕ್ಕೂ ವ್ಯತ್ಯಾಸವಿದೆ. ರಿಯಲ್ ಜೀವನದಲ್ಲಿ ನಾನು ಸಂಘರ್ಷ ಮಾಡಿದ್ದೇನೆ. ರೀಲ್ ಜೀವನದಲ್ಲಿ ಹೊಡೆದಾಟ ಮಾಡಿದ್ದೇನೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
`ರೌಡಿ ರಾಠೋಡ್~ ಚಿತ್ರದ ಯಶಸ್ಸಿನ ನಂತರ `ಖಿಲಾಡಿ~ ಎಂದು ಕರೆಯಿಸಿಕೊಳ್ಳುತ್ತಿದ್ದ ಅಕ್ಷಯ್ಗೆ ಈ `ರೌಡಿ~ ಎಂಬ ವಿಶೇಷಣ ರುಚಿಸುತ್ತಿಲ್ಲವಂತೆ.
ಚಿತ್ರೋದ್ಯಮದ ಆರಂಭಿಕ ದಿನಗಳಲ್ಲಿ ನಾನು ಸಾಕಷ್ಟು ಹೋರಾಡಿದ್ದೇನೆ. ಯಾವತ್ತಿದ್ದರೂ ದೇವರು ನನ್ನೊಂದಿಗಿದ್ದಾನೆ ಎಂಬ ಭರವಸೆಯೊಂದಿಗೆ ನಾನು ಮುಂದುವರಿದಿದ್ದೇನೆ. ಫೈಟ್ಗಳು, ಪಂಚ್ಗಳು ವೃತ್ತಿಯ ಒಂದು ಭಾಗ ಅಷ್ಟೆ! ಅದೇ ನನ್ನ ಮನೋಭಾವವಲ್ಲ. ಆದರೆ ವೃತ್ತಿ ಹಾಗೂ ಭವಿಷ್ಯಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇನೆ~ ಎಂದೂ ಹೇಳಿದ್ದಾರೆ.
`ಖಿಲಾಡಿ 786~ ಚಿತ್ರ ಬರಲಿದೆ. ಇದೊಂದು ಅತ್ಯಂತ ಖುಷಿ ಕೊಟ್ಟ ಪ್ರಾಜೆಕ್ಟ್. ಅದೊಂದು ಮಹತ್ವಪೂರ್ಣ ಚಿತ್ರವೆನಿಸಲಿದೆ ಎಂದೂ ಹೇಳಿದ್ದಾರೆ. 44 ವರ್ಷದ ಅಕ್ಷಯ್ ಕುಮಾರ್ಗೆ ರಾಜಕೀಯದಲ್ಲಿ ಆಸಕ್ತಿ ಇದೆಯೇ ಎಂದು ಪ್ರಶ್ನಿಸಿದರೆ... ರಾಜಕೀಯ ಪ್ರವೇಶಿಸಿದರೆ.. ಅಧಿಕಾರ ದೊರೆತರೆ.. ಖಂಡಿತವಾಗಿಯೂ ಕ್ರೀಡೆಗಾಗಿ ಶ್ರಮಿಸುವೆ ಎಂದು ಹೇಳಿದ್ದಾರೆ ಅಕ್ಷಯ್ ಕುಮಾರ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.