ನಿಟ್ಟೆ: ಆನಂದೋತ್ಸವ-–ಬಂಟಕಲ್ಗೆ ಸಮಗ್ರ ಪ್ರಶಸ್ತಿ

ಕಾರ್ಕಳ: ನಿಟ್ಟೆ ಎನ್.ಎಂ.ಎ.ಎಂ ತಾಂತ್ರಿಕ ಕಾಲೇಜಿನಲ್ಲಿ ನಡೆದ ಅಂತರ್ಕಾಲೇಜು ಸಾಂಸ್ಕತಿಕ–ಲಲಿತ ಕಲೆಗಳ ಉತ್ಸವ-ಆನಂದೋತ್ಸವದಲ್ಲಿ ಬಂಟಕಲ್ ಮಧ್ವವಾದಿರಾಜ ಎಂಜಿನಿಯರಿಂಗ್ ಕಾಲೇಜಿಗೆ ಸಮಗ್ರ ಪ್ರಶಸ್ತಿಯನ್ನು ಹಸ್ತಾಂತರಿಸಲಾಯಿತು.
ಬಹುಮಾನ ಪಟ್ಟಿಯಲ್ಲಿ ಅತಿಥೇಯ ನಿಟ್ಟೆ ಕಾಲೇಜು ಅಗ್ರಸ್ಥಾನದಲ್ಲಿದ್ದರೂ ನಿಯಮದಂತೆ 2ನೇ ಸ್ಥಾನ ಪಡೆದ ಬಂಟಕಲ್ ಕಾಲೇಜಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಲಾಯಿತು. ಮೂರನೇ ಸ್ಥಾನವನ್ನು ಮಂಗಳೂರು ವಳಚಿಲ್ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ಼್ ಟೆಕ್ನಾಲಜಿ ಕಾಲೇಜು ಗಳಿಸಿತು.
ವೈಯಕ್ತಿಕ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಕಾಲೇಜು ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲೂಣ್ಕರ್ ಸಮಾರೋಪ ಸಮಾರಮಭದ ಅಧ್ಯಕ್ಷತೆವಹಿಸಿ ಮಾತನಾಡಿ ಕಳೆದ ಮೂರು ದಿನಗಳಿಂದ ಕಾಲೇಜು ಆವರಣದಲ್ಲಿ ಹಬ್ಬದ ಕಳೆ ತುಂಬಿ ತುಳುಕುತ್ತಿತ್ತು. ರಾಜ್ಯದ ಸುಮಾರು ೨೦ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಂದ ಸುಮಾರು ೮೫೦ ವಿದ್ಯಾರ್ಥಿಗಳು ಸುಮಾರು ೨೭ ವಿವಿಧ ಸ್ಫರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ್ದಾರೆ. ಅವಕಾಶ ಉಪಯೊಗಿಸಿಕೊಂಡಂತಹ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಥೆಯ ಮುಖ್ಯಸ್ಥರ ಆಸಕ್ತಿಗೆ ವಿಶೇಷವಾದುದು ಎಂದರು.
ಡಾ.ಸೀತಾರಾಮ ಶೆಟ್ಟಿಗಾರ್ ಸಂಪಾದಕತ್ವದ ‘ಆನಂದ ಪತ್ರಿಕೆ’ ಯನ್ನು ಅನವರಣಗೊಳಿಸಲಾಯಿತು. ಉಪಪ್ರಾಂಶುಪಾಲ ಹಾಗೂ ಡೀನ್ ಡಾ. ಐ.ರಮೇಶ್ ಮಿತ್ತಂತಾಯ, ಉಪಪ್ರಾಂಶುಪಾಲ ಹಾಗೂ ಸಿ.ಓ.ಇ. ಡಾ.ಬಿ.ಆರ್.ಶ್ರೀನಿವಾಸ ರಾವ್, ಮುಖ್ಯಸಂಯೋಜಕರಾದ ಪ್ರೊ.ವಿಶ್ವನಾಥ್, ರಕ್ಷಾ ವಿಶ್ವನಾಥ್, ವಿದ್ಯಾರ್ಥಿ ಸಂಯೋಜಕ ಮರ್ವಿನ್ ಮತ್ತಿತರರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.